ಪುತ್ತೂರು: ರಸ್ತೆ ಅಪಘಾತದಲ್ಲಿ ತಲೆಗೆ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಗಣೇಶ್ ವಳಂಗಜೆ ಕೆದಿಲ ಇವರ ಕುಟುಂಬಕ್ಕೆ ಅರುಣ ಸಾರಥಿ ಚಾಲಕರ ಸಂಘಟನೆಯ ಸಹಯೋಗದಲ್ಲಿ 10,000 ರೂಪಾಯಿ ಧನಸಹಾಯವನ್ನು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ವತಿಯಿಂದ ಸಂಚಾಲಕರಾದ ಅರುಣ್ ಕುಮಾರ್ ಪುತ್ತಿಲ ಅವರ ಉಪಸ್ಥಿತಿಯಲ್ಲಿ ಹಿಂದವಿ ಕಛೇರಿಯಲ್ಲಿ ನೀಡಲಾಯಿತು.
ಈಗಾಗಲೇ ಪ್ರತೀ ತಿಂಗಳಿಗೆ 10,000 ರೂಪಾಯಿಯಂತೆ ಕಳೆದ 7 ತಿಂಗಳಿನಲ್ಲಿ ರೂಪಾಯಿ 70,000 ಸಾವಿರ ಧನ ಸಹಾಯವನ್ನು ಅನಾರೋಗ್ಯದಲ್ಲಿರುವವರಿಗೆ ವಿತರಣೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಸಂಘಟನೆಯ ಸದಸ್ಯರಾದ ಸಂದೇಶ್ ನಾೖಕ್ ಕೆಯ್ಯೂರು, ಸಚಿನ್ ವಳತ್ತಡ್ಕ ,ಮಹೇಶ್ ಸರ್ವೆ, ಸ್ವಸ್ತಿಕ್ ತಾರಿಗುಡ್ಡೆ, ಇನ್ಸೂರೆನ್ಸ್ ಸೊಲ್ಯೂಷನ್ ಉರ್ಲಾಂಡಿ ಇದರ ಮಾಲಕರಾದ ನಿಶಾಂತ್ ರೈ ಮೊದಲಾದವರು ಉಪಸ್ಥಿತರಿದ್ದರು.