ಪುತ್ತೂರು: ಅರಿಯಡ್ಕ ಗ್ರಾಮದ ಪಟ್ಲಕಾನ ದಿ.ದೇವಪ್ಪ ಗೌಡರ ಪತ್ನಿ ನೀಲಮ್ಮ ( 91ವ) ರವರು ಅಲ್ಪಕಾಲದ ಅಸೌಖ್ಯದಿಂದ ನೆಹರು ನಗರದ ಪುತ್ರ ನಿವೃತ್ತ ಸೈನಿಕ ಚಂದ್ರ ಶೇಖರ ಗೌಡರ ಮನೆಯಲ್ಲಿ ಜು.19 ರಂದು ನಿಧನರಾದರು.
ಮೃತರು ಪುತ್ರರಾದ ಬಾಬು ಗೌಡ, ಚಂದ್ರ ಶೇಖರ ಗೌಡ, ನಾರಾಯಣ ಪಟ್ಲಕಾನ, ಪುತ್ರಿಯರಾದ ರತ್ನಾವತಿ, ಬಾಲಾಕ್ಷಿ, ಸುಂದರಿ, ಸಾವಿತ್ರಿ, ಭಾರತಿ ಮತ್ತು ಸೊಸೆಯಂದಿರು ಮೊಮ್ಮಕ್ಕಳು ಹಾಗೂ ಮರಿ ಮಕ್ಕಳನ್ನು ಅಗಲಿದ್ದಾರೆ.