ಪುತ್ತೂರು: ಮುಂಡೂರು ಗ್ರಾಮದ ಸುರೇಶ್ ಗೌಡ ಅವರ ಮನೆ ಬಳಿ ಸಾಮಾಜಿಕ ಅರಣ್ಯದ ಗುಡ್ಡ ಕುಸಿದು ಬಾವಿ ಮತ್ತು ಅಂಗಳಕ್ಕೆ ಹಾನಿಯಾದ ಘಟನೆ ನಡೆದಿದೆ.
ಘಟನೆ ಬಗ್ಗೆ ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್ ಅವರು ಸೂಕ್ತ ಕ್ರಮ ತೆಗೆದುಕೊಳ್ಳಲು ಮತ್ತು ಪರಿಹಾರಕ್ಕೆ ಕ್ರಮ ಕೈಗೊಳ್ಳಲು ಸಂಬಂಧಪಟ್ಟವರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಮುಂಡೂರು ತುರ್ತು ಸೇವಾ ಸಮಿತಿ ಮತ್ತು ಅಜ್ಜಿಕಟ್ಟೆ ತುರ್ತು ಸೇವಾ ಸಮಿತಿ ಸದಸ್ಯರಾದ, ಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಆಶ್ರಫ್ ಮುಲಾರ್, ಬೂತ್ ಅಧ್ಯಕ್ಷ ಪದ್ಮಯ್ಯ ಬಂಡಿಕಾನ, ವಲಯ ಉಪಾಧ್ಯಕ್ಷ ರಜಾಕ್ ಮುಲಾರ್, ಸ್ಥಳೀಯರಾದ ಅರುಣ್ ಕುಮಾರ್ ಪಟ್ಟೆ, ಮಯಾಜ್ ಮುಲಾರ್, ಇಸಾಕ್ ಅಂಬಟ, ನಝೀರ್, ಅಸೀಮ್, ಮುಫೀಝ್ ಮುಲಾರ್ ,ಆಸೀಫ್ , ಕುರಿಯ ವಲಯ ಯೂತ್ ಅಧ್ಯಕ್ಷ ಹಸೈನಾರ್ ಸಂತೋಷ್, ಬ್ಲಾಕ್ ಅಲ್ಪ ಸಂಖ್ಯಾತ ಸಂಘಟನಾ ಕಾರ್ಯದರ್ಶಿ ಉಸ್ಮಾನ್ ಸಂತೋಷ್ ಮೊದಲಾವರು ಭೇಟಿ ನೀಡಿ ವೀಕ್ಷಣೆ ಮಾಡಿದರು.