ಗೌರವಾಧ್ಯಕ್ಷರಾಗಿ ಪ್ರಮೋದ್ ಆರಿಗ, ಅಧ್ಯಕ್ಷರಾಗಿ ನಾಗೇಶ ಗೌಡ, ಕಾರ್ಯದರ್ಶಿಯಾಗಿ ಮಂಜುನಾಥ ರೈ, ಕೋಶಾಧಿಕಾರಿಯಾಗಿ ಗೋಪಾಲಕೃಷ್ಣ ಭಟ್ ಆಯ್ಕೆ
ನಿಡ್ಪಳ್ಳಿ: ಶ್ರೀ ಶಾಂತದುರ್ಗಾ ದೇವಸ್ಥಾನದ ದ್ವಿತೀಯ ತ್ರೈವಾರ್ಷಿಕ ಮಹಾಸಭೆ ಆಡಳಿತ ಮಂಡಳಿ ಅಧ್ಯಕ್ಷ ನಾರಾಯಣ ರೈ ಕೊಪ್ಪಳ ಇವರ ಅಧ್ಯಕ್ಷತೆಯಲ್ಲಿ ಜು.20ರಂದು ನಡೆಯಿತು. ಮುಂದಿನ ಮೂರು ವರ್ಷದ ಅವದಿಗೆ ನೂತನ ಆಡಳಿತ ಮಂಡಳಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಪ್ರಮೋದ್ ಆರಿಗ ನಿಡ್ಪಳ್ಳಿ ಗುತ್ತು, ಅಧ್ಯಕ್ಷರಾಗಿ ನಾಗೇಶ ಗೌಡ ಪುಳಿತ್ತಡಿ, ಕಾರ್ಯದರ್ಶಿಯಾಗಿ ಮಂಜುನಾಥ ರೈ ಕೊಳಂಬೆತ್ತಿಮಾರು, ಕೋಶಾಧಿಕಾರಿಯಾಗಿ ಗೋಪಾಲಕೃಷ್ಣ ಭಟ್ ಕುಕ್ಕುಪುಣಿ ಆಯ್ಕೆಯಾದರು.

ಸಮಿತಿಯ ಸದಸ್ಯರಾಗಿ ಶಿವಪ್ಪ ಪೂಜಾರಿ ನುಳಿಯಾಲು, ಪದ್ಮನಾಭ ಬೋರ್ಕರ್ ಬ್ರಹ್ಮರಗುಂಡ, ರಾಮಚಂದ್ರ ಮಣಿಯಾಣಿ ಬೊಳುಂಬುಡೆ, ಕುಮಾರ ನರಸಿಂಹ ಭಟ್ ಬುಳೆನಡ್ಕ, ದಿವ್ಯಾ.ಕೆ ಶೆಟ್ಟಿ ಪುತ್ತೂರು, ತಿಮ್ಮಣ್ಣ ರೈ ಆನಾಜೆ, ಪುರಂದರ ರೈ ಸೇರ್ತಾಜೆ, ವಸಂತ ರೈ ಕೊಲ್ಲಮಜಲು,ಪದ್ಮನಾಭ ಕುಲಾಲ್ ಗುರಿ, ರಮೇಶ ಆಚಾರ್ಯ ಬರೆಂಬೊಟ್ಟು, ಕೇಶವ ನಾಯ್ಕ ಕೂಟೇಲು ಇವರು ಆಯ್ಕೆಯಾದರು.
ವೃದ್ದಿ ಕೊಪ್ಪಳ ಪ್ರಾರ್ಥಿಸಿ, ನಾಗೇಶ ಗೌಡ ಸ್ವಾಗತಿಸಿದರು. ನಿಕಟಪೂರ್ವ ಕಾರ್ಯದರ್ಶಿ ಕುಮಾರ ನರಸಿಂಹ ಭಟ್ ವರದಿ ವಾಚಿಸಿ ಲೆಕ್ಕಪತ್ರ ಮಂಡಿಸಿ ವಂದಿಸಿದರು.
ಟ್ರಸ್ಟ್ ಅಧ್ಯಕ್ಷ ರಾಧಾಕೃಷ್ಣ ರೈ ಆನಾಜೆ ಸಮಿತಿ ರಚನೆಯ ಪ್ರಕ್ರಿಯೆ ನಡೆಸಿ ಕೊಟ್ಟರು.ದೇವಸ್ಥಾನದ ಪ್ರಧಾನ ಅರ್ಚಕ ನವೀನ್ ಹೆಬ್ಬಾರ್, ಹರ್ಷೇಂದ್ರ ಪಡಿವಾಳ್ ಅಳಿಯೂರು ಗುತ್ತು ಸೇರಿದಂತೆ ಊರ ಭಕ್ತಾದಿಗಳು ಪಾಲ್ಗೊಂಡರು.