ನೆಲ್ಯಾಡಿ : ಶಿವಳ್ಳಿ ಸಂಪದ ವತಿಯಿಂದ ‘ಆಟಿಡ್ ಒಂಜಿ ದಿನ’ ಕಾರ್ಯಕ್ರಮ

0

ನೆಲ್ಯಾಡಿ: ಶಿವಳ್ಳಿ ಸಂಪದ ವತಿಯಿಂದ ಸಮಾಜ ಬಾಂಧವರಿಗಾಗಿ ‘ಆಟಿಡ್ ಒಂಜಿ ದಿನ’ ಕಾರ್ಯಕ್ರಮ ಸತೀಶ್ ಮೂಡಂಬಡಿತ್ತಾಯ ಅವರ ದುರ್ಗಾಶ್ರೀ ನಿಲಯದಲ್ಲಿ ಜು.20ರಂದು ನಡೆಯಿತು. ವಿಷ್ಣು ಸಹಸ್ರನಾಮ ಪಠಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಕಾರ್ಯಕ್ರಮದಲ್ಲಿ ವಿಶೇಷ ಸಾಧನೆಗೈದ ಸಮಾಜ ಬಾಂಧವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕೆ.ಎಸ್.ಆರ್.ಟಿ.ಸಿ. ಮತ್ತು ಭಾರಿ ವಾಹನ ತರಬೇತಿ ಸಂಸ್ಥೆಯಲ್ಲಿ ಅತ್ಯುನ್ನತ ಸಾಧನೆಗೈದ ಮುರಳಿಧರ ಆಚಾರ್, ಖ್ಯಾತ ಪಾಕ ಶಾಸ್ತ್ರಜ್ಞ ಲಕ್ಷ್ಮೀನಾರಾಯಣ ಗಡಿಗಲ್, ಧಾರ್ಮಿಕ ಕ್ಷೇತ್ರದಲ್ಲಿನ ಸಾಧನೆಗಾಗಿ, ಸೌತಡ್ಕ ಮಹಾಗಣಪತಿ ದೇವಸ್ಥಾನದಲ್ಲಿ ಎರಡು ಬಾರಿ ವ್ಯವಸ್ಥಾಪನಾ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಗೊಂಡು ಸಾಧನೆಗೈಯುತ್ತಿರುವ ಸುಬ್ರಹ್ಮಣ್ಯ ಶಬರಾಯ, ಕಲಿಕೆಯಲ್ಲಿ ಪ್ರತಿಭಾ ಪುರಸ್ಕಾರ ಪಡೆದ ಚೈತನ್ಯ ಗಡಿಗಲ್ ಅವರನ್ನು ಅಭಿನಂದಿಸಲಾಯಿತು.

ಶ್ರೇಯಸ್ ಕುಮಾರ್ ಪ್ರಾರ್ಥನೆಗೈದು, ಶಿವಳ್ಳಿ ಸಂಪದ ನೆಲ್ಯಾಡಿ ವಲಯದ ಅಧ್ಯಕ್ಷರಾದ ರಾಜೇಶ್ ರಾವ್ ಸ್ವಾಗತಿಸಿದರು. ಶಾರದಾ ನೀತಿ ಸಂಹಿತೆ ಪಠನೆಗೈದರು. ಸತೀಶ್ ಮೂಡಂಬಡಿತ್ತಾಯ ಆಟಿಕೂಟದ ಬಗ್ಗೆ ಪ್ರಸ್ತಾವಿಕ ನುಡಿಗಳನ್ನಾಡಿ ಅತಿಥಿಗಳನ್ನು ಗೌರವಿಸಿದರು. ರವೀಂದ್ರ ಟಿ., ಆರ್. ವೆಂಕಟರಮಣ, ಆಶಾ ಜೋಗಿತ್ತಾಯ, ವನಿತಾ ಜೋಗಿತ್ತಾಯ ಸನ್ಮಾನಿತರನ್ನು ಸಭೆಗೆ ಪರಿಚಯಿಸಿದರು. ರವೀಂದ್ರ ಟಿ ಕಾರ್ಯಕ್ರಮ ನಿರ್ವಹಿಸಿದರು ರಾಧಾಕೃಷ್ಣ ಮಂಡೆಗುಂಡಿ ವಂದಿಸಿದರು.

ಶಿವಳ್ಳಿ ಸಂಪದ ಪುತ್ತೂರು ತಾಲೂಕಿನ ಅಧ್ಯಕ್ಷ ಸುಧೀಂದ್ರ ಕುದ್ದಣ್ಣಾಯ, ಕಾರ್ಯದರ್ಶಿ ಲಕ್ಷ್ಮೀನಾರಾಯಣ ಕಡಂಬಳಿತ್ತಾಯ, ಕೋಶಾಧಿಕಾರಿ ರಂಗನಾಥ್ ಉಂಗುರುಪುಳಿತ್ತಾಯ, ನಿಕಟ ಪೂರ್ವ ಅಧ್ಯಕ್ಷರಾದ ದಿವಾಕರ ನಿಡ್ವಣ್ಣಾಯ, ತಾಲೂಕು ಸಂಪದದ ಪದಾಧಿಕಾರಿಗಳಾದ ನಾಗರಾಜ ನಿಡ್ವಣ್ಣಾಯ, ಪ್ರಕಾಶ ಭಟ್, ಹರಿಪ್ರಸಾದ್ ದಾಳಿಂಬ ಹಾಗೂ ಊರಿನ ಶಿವಳ್ಳಿ ಸಮಾಜ ಬಂಧುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ಮನೆ ದೇವರಿಗೆ ಪೂಜೆಯನ್ನು ಸಲ್ಲಿಸಿ, ಶಿವಳ್ಳಿ ಬಾಂಧವರು ಮನೆಯಲ್ಲಿಯೇ ತಯಾರಿಸಿ ತಂದ ವಿವಿಧ ಖಾದ್ಯಗಳನ್ನು ಗಡಿಗಲ್ ಲಕ್ಷ್ಮೀನಾರಾಯಣ ಪೆರ್ಮೊದೆನ್ನಾಯರು ಅನ್ನಪೂರ್ಣಾ ದೇವಿಗೆ ದೀಪ ಬೆಳಗಿಸಿ ಸಮರ್ಪಿಸಿದ ಬಳಿಕ ಸಹ ಭೋಜನ ನಡೆಯಿತು.

LEAVE A REPLY

Please enter your comment!
Please enter your name here