

ಪುತ್ತೂರು: ಕಲ್ಲಾರೆಯಲ್ಲಿರುವ ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆ 25ನೇ ವರ್ಷದ ಸಂಭ್ರಮಾಚರಣೆಯಲ್ಲಿ 25 ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮೊದಲ ಕಾರ್ಯಕ್ರಮವಾಗಿ ಭಾವಗೀತೆಯನ್ನು ನಡೆಸಲಾಯಿತು.
ಅಧ್ಯಾಪಕಿ ಶಾರದಾ ಭಟ್ ಅವರು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಹಾಡಿದರು. ಉಪ್ಪಿನಂಗಡಿ ಶಾಖೆಯ ಅನುಷಾ ಜಿ ಅಮ್ಮಣ್ಣಾಯ ಅವರು ಸುಗಮ ಸಂಗೀತ ಹಾಡಿದರು. ಪ್ರವೀಣ್ ವರ್ಣಕುಟೀರ, ವಿದ್ಯಾರ್ಥಿಗಳಾದ ಧನುಷ್, ತ್ರಿಸ್ದ ಭಟ್, ಸುಹೃತ ಭಟ್ ಅವರು ಸಂಗೀತ ಹಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾರದಾ ಭಟ್, ಅನುಷಾ ಜಿ ಅಮ್ಮಣ್ಣಯ ಭಾಗವಹಿಸಿ ರಂಗ ಶಿಕ್ಷಣಕ್ಕೆ ಬೇಕಾದ ಲೈಟ್‌ಗಳನ್ನು ಉದ್ಘಾಟಿಸಿದರು. ಡೆಲ್ಲಿ ಯುನಿರ್ವಸಿಟಿ ನಡೆಸಿದ ಪೈಟಿಂಗ್ ವಿಭಾಗದಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಇದೇ ಸಂದರ್ಭ ಪ್ರಮಾಣ ಪತ್ರ ವಿತರಿಸಲಾಯಿತು.