ಬುರೂಜ್ ಶಾಲೆ: ಹತ್ತನೇ ತರಗತಿಯ ಪೋಷಕರ ಸಭೆ

0

ರಝಾನಗರ: ಬುರೂಜ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ರಝಾನಗರ ಇಲ್ಲಿ 2025-2026ನೇ ಸಾಲಿನ ಹತ್ತನೇ ತರಗತಿಯ ಮೊದಲ ಪೋಷಕರ ಸಭೆ ನಡೆಸಲಾಯಿತು.

ಈ ಸಭೆಯ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ಶೇಖ್ ರಹ್ಮತ್ತುಲ್ಲಾಹ್ ವಹಿಸಿದ್ದರು. ಜೀವನದಲ್ಲಿ ಗೆಳೆತನವು ಮುಖ್ಯವಲ್ಲ ನಮ್ಮ ಗುರಿ ಮುಖ್ಯವಾಗಿರಬೇಕು ಎಂದು ಪೋಷಕರು ಹಾಗೂ ಸರಕಾರಿ ಶಾಲೆ ವಗ್ಗ ಇಲ್ಲಿಯ ಮುಖ್ಯ ಶಿಕ್ಷಕರಾದ ಶೇಖ್ ಆದಂ ಸಾಹೇಬ್ ನೆಲ್ಯಾಡಿ ಪೋಷಕರಿಗೆ ಹಾಗೂ ಮಕ್ಕಳಿಗೆ ಸಲಹೆ ಸೂಚನೆಗಳನ್ನು ನೀಡಿದರು. ಹತ್ತನೇ ತರಗತಿಯ ವಿಷಯವಾರು ಶಿಕ್ಷಕರಾದ ಶೇಖ್ ಜಲಾಲುದ್ದೀನ್, ಮಮತಾ ಆರ್, ಸಪ್ನಾಝ್ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಜಯಶ್ರೀ ಸಾಲ್ಯಾನ್ ಸ್ವಾಗತಿಸಿದರು. ಚೇತನಾ ಜೈನ್ ವಂದನಾರ್ಪಣೆ ಗೈದರು. ಕಾರ್ಯಕ್ರಮ ನಿರೂಪಣೆ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಎಲ್ಸಿ ಲಸ್ರಾದೋ ನೆರವೇರಿಸಿದರು.

LEAVE A REPLY

Please enter your comment!
Please enter your name here