ರಾಮಕುಂಜ: ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಘ ಹಾಗೂ ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮ ಜು.೨೧ರಂದು ಶಾಲಾ ಸಭಾಂಗಣದಲ್ಲಿ ಜರುಗಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಿವೃತ್ತ ಅಧ್ಯಾಪಕ ಶ್ರೀನಿವಾಸ ಅವರು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿ, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸುವ ಭರವಸೆ ನೀಡಿದರು. ಶಾಲಾ ಮುಖ್ಯಗುರು ಸತೀಶ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಇನ್ನೋರ್ವ ಅತಿಥಿ ಸಂಸ್ಥೆ ಹಿರಿಯ ವಿದ್ಯಾರ್ಥಿಯೂ ಆಗಿದ್ದು ಕಾನೂನು ವ್ಯಾಸಂಗ ಮಾಡುತ್ತಿರುವ ಪ್ರಜ್ವಲಕೃಷ್ಣ ಶುಭಹಾರೈಸಿದರು.

ಹಿಂದಿ ಶಿಕ್ಷಕಿ ಪುಷ್ಪ ವಿವಿಧ ಸಂಘಗಳ ಪ್ರಸ್ತಾವನೆ ನೀಡಿದರು. ಶಾಲಾ ಸಂಘದ ರಚನೆಯ ಕುರಿತ ವಿವರವನ್ನು ಶಿಕ್ಷಕಿ ದಿನೇಶ್ ನೀಡಿದರು. ವಿದ್ಯಾರ್ಥಿ ಸಂಘದ ಪ್ರಮಾಣ ವಚನ ಸ್ವೀಕಾರವನ್ನು ಸಂಸ್ಕೃತ ಶಿಕ್ಷಕ ರವಿ ಭಟ್ ನೆರವೇರಿಸಿದರು. ಗಣಿತ ಶಿಕ್ಷಕಿ ಮಧುರ ಸ್ವಾಗತಿಸಿದರು. ಇಂಗ್ಲೀಷ್ ಶಿಕ್ಷಕಿ ಭವ್ಯ ವಂದಿಸಿದರು. ಸಮಾಜ ವಿಜ್ಞಾನ ಅಧ್ಯಾಪಕ ದಿನೇಶ್‌ರವರು ನಿರೂಪಿಸಿದರು.