ಪುತ್ತೂರು: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ ಪುತ್ತೂರು ಕ್ಷೇತ್ರ ಸಮಿತಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಪುತ್ತೂರು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಜು.20ರಂದು ನಡೆಯಿತು.

ಟೈಲರ್ ಅಸೋಸಿಯೇಶನ್ ಪುತ್ತೂರು ಕ್ಷೇತ್ರ ಸಮಿತಿ ಪದಾಧಿಕಾರಿಗಳು ರಾಜ್ಯ ಸಮಿತಿ ಪದಾಧಿಕಾರಿಗಳು, ದ.ಕ ಜಿಲ್ಲಾ ಸಮಿತಿ ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆಯಿತು. ಪುತ್ತೂರು ಕ್ಷೇತ್ರ ಸಮಿತಿ ನೂತನ ಅಧ್ಯಕ್ಷರಾಗಿ ಚಿಕ್ಕಮುಡ್ನೂರು ತಾರಿಗುಡ್ಡೆ ದಯಾನಂದ ಹೆಗ್ಡೆ, ಪ್ರಧಾನ ಕಾರ್ಯದರ್ಶಿಯಾಗಿ ಈಶ್ವರಮಂಗಲ ಗಣೇಶ್ ಯಂ, ಕೋಶಾಧಿಕಾರಿಯಾಗಿ ಜಯಂತ ಉಪ್ಪಿನಂಗಡಿ, ಕ್ಷೇತ್ರ ಸಮಿತಿ ಸಂಘಟನಾ ಕಾರ್ಯದರ್ಶಿಯಾಗಿ ಯಶೋಧರ್ ಜೈನ್ ದರ್ಬೆ, ಉಪಾಧ್ಯಕ್ಷರಾಗಿ ಪರಮೇಶ್ವರ್ ಕಾಣಿಯೂರು, ಉಪಾಧ್ಯಕ್ಷರಾಗಿ ಚಿತ್ರಾ ಬಿ ಸಿ ಕುಂಬ್ರ, ಜೊತೆ ಕಾರ್ಯದರ್ಶಿಯಾಗಿ ವಿಜಯಲಕ್ಷ್ಮಿ ನೆಲ್ಲಿಕಟ್ಟೆ, ಯಶೋಧ ಸಣೂರು ಮೆದು ರವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ರಾಜ್ಯ ಅಧ್ಯಕ್ಷ ನಾರಾಯಣ ಬಿ ಎ, ಕ್ಷೇತ್ರ ಸಮಿತಿ ಅಧ್ಯಕ್ಷೆ ಉಮಾ ನಾಕ್ ಯು ಪುತ್ತೂರು, ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಎ ಪ್ರಜ್ವಲ್ ಕುಮಾರ್, ರಾಜ್ಯ ಉಪಾಧ್ಯಕ್ಷ ಸುರೇಶ್ ಸಾಲಿಯಾನ್, ದ.ಕ. ಜಿಲ್ಲಾ ಅಧ್ಯಕ್ಷೆ ವಿದ್ಯಾ ಶೆಟ್ಟಿ, ರಾಜ್ಯ ಸಮಿತಿ ಅಂತರಿಕ ಲೆಕ್ಕ ಪರಿಶೋಧಕ ರಘನಾಥ್ ಬಿ, ದ.ಕ ಜಿಲ್ಲಾ ಸಮಿತಿ ಕಾರ್ಯದರ್ಶಿ ಮೊಹನ್ ಎಸ್ಕೋಡಿ, ದ.ಕ. ಜಿಲ್ಲಾ ಸಮಿತಿ ಕೋಶಾಧಿಕಾರಿ ಚಕ್ರೇಶ್ ಅಮೀನ್, ದ.ಕ ಮಾಜಿ ಜಿಲ್ಲಾಧ್ಯಕ್ಷ ಜಯಂತ ಉರ್ಲಾಂಡಿ ದ.ಕ ಜಿಲ್ಲಾ ಉಪಾಧ್ಯಕ್ಷ ಶಂಭು ಬಲ್ಯಾಯ, ದ.ಕ. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜಯರಾಮ ಬಿ ಎನ್, ದ.ಕ ಜಿಲ್ಲಾ ಜೊತೆಕಾರ್ಯದರ್ಶಿ ಸುರೇಖಾ ನಿಟ್ಪಳ್ಳಿ, ಕ್ಷೇತ್ರ ಸಮಿತಿ ಅಧ್ಯಕ್ಷೆ ಉಮಾ ಯು ನಾಕ್ ಪುತ್ತೂರು, ಪ್ರ.ಕಾರ್ಯದರ್ಶಿ ಚಿತ್ರಾ ಬಿ.ಸಿ ಕುಂಬ್ರ, ಕೋಶಾಧಿಕಾರಿ ಪರಮೇಶ್ವರ ಅನಿಲ ಮೊದಲಾದವರು ಉಪಸ್ಥಿತರಿದ್ದರು.