ಪುತ್ತೂರು: ಜು.24 ರಂದು ಆಟಿ ಅಮವಾಸ್ಯೆಯ ಅಂಗವಾಗಿ ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮೀ ಮಠದಲ್ಲಿ ಹಾಲೆ ಕೆತ್ತೆಯ ಕಷಾಯವನ್ನು ಬೆಳಗ್ಗೆ ಗುರುರಾಯರಿಗೆ ನೈವೇದ್ಯ ಸಮರ್ಪಣೆ ಬಳಿಕ ಭಕ್ತರಿಗೆ ತೀರ್ಥ ರೂಪದಲ್ಲಿ ವಿತರಿಸಲಾಯಿತು.

ಮಠದ ಅರ್ಚಕ ರಾಘವೇಂದ್ರ ಉಡುಪ ಅವರು ಬೆಳಗ್ಗಿನ ಪೂಜೆ ನೆರವೇರಿಸಿದರು. ಬಳಿಕ ಅವರು ಭಕ್ತರಿಗೆ ಕಷಾಯವನ್ನು ಮತ್ತು ಶ್ರೀ ದೇವರ ತೀರ್ಥ ಮಂತ್ರಾಕ್ಷತೆಯನ್ನು ವಿತರಿಸಿದರು. ಮಠದ ಹೋರಾಂಗಣದಲ್ಲಿ ಮನೆಗೆ ಕೊಂಡೊಯ್ಯಲು ಕಷಾಯದ ವ್ಯವಸ್ಥೆ ಮಾಡಲಾಗಿತ್ತು. ಸುಧೀರ್ ಕಲ್ಲಾರೆ ಅದನ್ನು ನಿರ್ವಹಿಸಿದರು. ಮಠದ ಕಾರ್ಯದರ್ಶಿ ಯು ಪೂವಪ್ಪ, ಜಯರಾಜ್ ಉಪಸ್ಥಿತರಿದ್ದರು.