ಬಡಗನ್ನೂರು: ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ ಕುತ್ಯಾಳ ನಿವಾಸಿ, ಶೇಣಿ ನಳಿನಾಕ್ಷಿ ಶೆಟ್ಟಿ ಕುತ್ಯಾಳ (81) ಅವರು ಅನಾರೋಗ್ಯದಿಂದಾಗಿ ಜು.22 ರಂದು ನಿಧನರಾದರು.
ಪಡುವನ್ನೂರು ಗ್ರಾಮದ ಸಜಂಕಾಡಿಯ ದಿವಂಗತ ಸುಬ್ಬಪ್ಪ ಶೆಟ್ಟಿ ಅವರ ಪತ್ನಿಯಾದ ನಳಿನಾಕ್ಷಿ ಶೆಟ್ಟಿ ಕೃಷಿಕರಾಗಿದ್ದರು.
ಮೃತರು ಪುತ್ರಿಯಾದ ನಿವೃತ್ತ ಶಿಕ್ಷಕಿ ಉಷಾ ಉಮೇಶ್ ಶೆಟ್ಟಿ ಉಬರಡ್ಕ, ಪುತ್ರರಾದ ಶಿವಮೊಗ್ಗದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕರಾಗಿರುವ ಮುರಳೀಧರ್ ಶೆಟ್ಟಿ ಹಾಗೂ ನೆಟ್ಟಣಿಗೆ ಮುಡ್ನೂರು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ದೇವಿಪ್ರಕಾಶ್ ಶೆಟ್ಟಿ ಕುತ್ಯಾಳ ಅವರನ್ನು ಅಗಲಿದ್ದಾರೆ.