ಕಾರ್ಯದರ್ಶಿ: ಅಮೋಘ್, ಸಭಾಪತಿ: ಶರತ್ ಗೌಡ
ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಪೂರ್ವ ಪ್ರಾಯೋಜಿತ ರೋಟರಾಕ್ಟ್ ಕಬ್ಲ್ ತಿಂಗಳಾಡಿ ಇದರ ೨೦೨೫-೨೬ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ನಡೆದಿದ್ದು, ಅಧ್ಯಕ್ಷರಾಗಿ ನಿತೇಶ್ ರೈ ಕೊರಂಗ, ಕಾರ್ಯದರ್ಶಿಯಾಗಿ ಅಮೋಘ್ ಎಸ್.ಡಿ. ಸೊರಕೆ, ಸಭಾಪತಿಯಾಗಿ ಶರತ್ ಗೌಡ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಪ್ರಜ್ವತ್ ರೈ, ಜೊತೆ ಕಾರ್ಯದರ್ಶಿಯಾಗಿ ಸಂತೋಷ್ ರೈ, ನಿಕಟಪೂರ್ವ ಅಧ್ಯಕ್ಷ ಮನ್ವಿತ್ ರೈ, ಖಜಾಂಜಿಯಾಗಿ ಹರ್ಷಿತ್ ರೈ, ಶಿಸ್ತಿನ ಸಿಪಾಯಿಯಾಗಿ ಅಕ್ಷತ್ ರೈ, ಸಹಲೆಗಾರರಾಗಿ ಅನೇಶ್ ಶೆಟ್ಟಿ ನೇಮಕಗೊಂಡಿದ್ದಾರೆ. ನಿರ್ದೇಶಕರಾಗಿ ಲೋಹಿತ್ ಗೌಡ, ಪ್ರದ್ವಿನ್ ರೈ, ಅನೀಶ್ ಶೆಟ್ಟಿ, ಹರೀಶ್ ರೈ, ಧನುಷ್ ರೈ, ಸನತ್ ಗೌಡ ಅವರು ಆಯ್ಕೆಯಾಗಿದ್ದಾರೆ.
ಜು.27: ಪದಪ್ರದಾನ ಸಮಾರಂಭ
ರೋಟರಾಕ್ಟ್ ಕಬ್ಲ್ ತಿಂಗಳಾಡಿ ಇದರ 2025-26ನೇ ಸಾಲಿನ ಪದಾಧಿಕಾರಿಗಳ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭವು ಜು.27 ರಂದು ಸಂಜೆ 6.30ಕ್ಕೆ ಕೆದಂಬಾಡಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಲಿದೆ. ಪದ ಪ್ರದಾನ ಅಧಿಕಾರಿಯಾಗಿ ರೋಟರಿ ಕ್ಲಬ್ ಪುತ್ತೂರು ಪೂರ್ವ ಅಧ್ಯಕ್ಷ ಶಶಿಧರ್ ಕಿನ್ನಿಮಜಲು ಅವರು ಆಗಮಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರೋಟರಾಕ್ಟ್ ಕ್ಲಬ್ ತಿಂಗಳಾಡಿ ಸ್ಥಾಪಕಾಧ್ಯಕ್ಷ ರತ್ನಾಕರ ರೈ, ಹಿಂದಿನ ಸಹಾಯಕ ಗವರ್ನರ್ ಹರ್ಷ ಕುಮಾರ್ ರೈ, ಕೆನರಾ ಜೋನ್‌ನ ಝಡ್‌ಆರ್‌ಆರ್ ಸುಬ್ರಮಣಿ ಪಿ.ವಿ. ಆಗಮಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.