ಪುತ್ತೂರು: ಭಾರೀ ಮಳೆಗೆ ಮನೆಯೊಂದು ಕುಸಿತಕ್ಕೊಳಗಾದ ಘಟನೆ ನೆ.ಮುಡ್ನೂರು ಗ್ರಾಮದ ಮೇನಾಲ ಜಲಧರ ಕಾಲನಿಯಲ್ಲಿ ಜು.24ರಂದು ರಾತ್ರಿ ನಡೆದಿದೆ.
ಬಾಬು ಎಂಬವರ ಮನೆ ಭಾಗಶ ಕುಸಿತಕ್ಕೊಳಗಾಗಿದ್ದು ಮನೆಯ ಇಟ್ಟಿಗೆಯ ಗೋಡೆ, ಶೀಟು ಮುರಿದು ಬಿದ್ದಿದೆ. ಈ ವೇಳೆ ಮನೆಯಲ್ಲಿದ್ದ ಬಾಬು ಮತ್ತು ಅವರ ಪತ್ನಿ ಅದೃಷ್ಟವಾಶಾತ್ ಯಾವುದೇ ಆಪಾಯವಿಲ್ಲದೇ ಪಾರಾಗಿದ್ದಾರೆ.

ಸ್ಥಳಕ್ಕೆ ನೆ.ಮುಡ್ನೂರು ಗ್ರಾ.ಪಂ ಉಪಾಧ್ಯಕ್ಷ ರಾಮ ಮೇನಾಲ, ಸದಸ್ಯ ರಮೇಶ್ ರೈ ಸಾಂತ್ಯ, ಪಿಡಿಓ ಸುಬ್ಬಯ್ಯ ಹಾಗೂ ಸಿಬ್ಬಂದಿ ಶೀನಪ್ಪ ನಾಯ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.