ಶಾಲಿನಿ ರಜನೀಶ್ ವಿರುದ್ಧ ಅವಹೇಳನಕಾರಿ ಹೇಳಿಕೆ:​ ರವಿಕುಮಾರ್ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆ

0

ರವಿಕುಮಾರ್ ಪರ ವಾದ ಮಂಡಿಸಿದ ಅರುಣ್ ಶ್ಯಾಮ್

ಪುತ್ತೂರು: ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪ ಹೊತ್ತಿದ್ದ ಬಿಜೆಪಿ ಎಂಎಲ್‌ಸಿ ಎನ್​ ರವಿಕುಮಾರ್ ವಿರುದ್ಧದ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ.

ಶಾಲಿನಿ ರಜನೀಶ್ ದೂರು ನೀಡಿಲ್ಲ, 3ನೇ ವ್ಯಕ್ತಿ ದೂರು ಆಧರಿಸಿ ಕೇಸ್ ದಾಖಲಿಸಲಾಗಿದೆ.​ ಹೇಳಿಕೆಯಲ್ಲಿ ಅಪರಾಧದ ಅಂಶಗಳಿಲ್ಲವೆಂದು ಎಂಎಲ್​ಸಿ ರವಿಕುಮಾರ್ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದರು. ವಾದ-ಪ್ರತಿವಾದ ಬಳಿಕ ಮಧ್ಯಂತರ ತಡೆ ನೀಡಿ ನ್ಯಾ.ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಪೀಠ ಆದೇಶ ಹೊರಡಿಸಿದೆ.

ಪ್ರಕರಣ ಹಿನ್ನಲೆ
ಜೂನ್ 30ರಂದು ಪರಿಷತ್​ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತ್ತು. ಮಹದೇವಪುರ ವಲಯದಲ್ಲಿ ದಲಿತರ ಭೂಮಿಯನ್ನ ಅರಣ್ಯ ಇಲಾಖೆ ಕಸಿದುಕೊಳ್ಳುತ್ತಿದೆ ಅಂತಾ ಆರೋಪಿಸಿತ್ತು. ಇದರ ವಿರುದ್ಧ ದೂರು ಕೊಡಲು ಹಲವು ಬಾರಿ ಹೋದಾಗ್ಲೂ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸಿಕ್ಕಿರಲಿಲ್ವಂತೆ. ವಿಧಾನಸೌಧ ಭದ್ರತೆ ಉಪ ಪೊಲೀಸ್​ ಆಯುಕ್ತ ಎಂ.ಎನ್​ ಕರಿಬಸವನಗೌಡ ಅವರೊಂದಿಗೆ ಛಲವಾದಿ ಮಾತನಾಡ್ತಿದರು. ಆಗ ಬಿಜೆಪಿ ಲೀಡರ್ ಮುನಿಸ್ವಾಮಿ, ಚೀಫ್ ಸೆಕ್ರೆಟರಿ ಬರೀ ಕರ್ನಾಟಕಕ್ಕಾ ಇಲ್ಲ ಮುಖ್ಯಮಂತ್ರಿಗಳಿಗಾ ಅಂತಾ ಪ್ರಶ್ನಿಸಿದರು. ಈ ಮಾತಿಗೆ ಮಾತು ಜೋಡಿಸಿದ ಎನ್​. ರವಿಕುಮಾರ್‌, ಅಸಭ್ಯ ಪದ ಬಳಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಎನ್​.ರವಿಕುಮಾರ್ ವಿರುದ್ಧ ಎಫ್​ಐಆರ್​ ಕೂಡ ದಾಖಲಾಗಿತ್ತು.

LEAVE A REPLY

Please enter your comment!
Please enter your name here