ಪುತ್ತೂರು: ನೆಹರುನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ, ತಮ್ಮ ಪ್ರಾಣವನ್ನು ಒತ್ತೆಯಿಟ್ಟು ದೇಶ ರಕ್ಷಣೆ ಮಾಡುವ ಯೋಧರ ಧೈರ್ಯ, ಶೌರ್ಯ, ಬಲಿದಾನ ಸ್ಮರಣೆಯೊಂದಿಗೆ ಗೌರವಾರ್ಪಣ ಮತ್ತು ವಿಜಯೋತ್ಸವ ಕಾರ್ಯಕ್ರಮ ಜು.26ರಂದು ನಡೆಯಿತು.


ಮುಖ್ಯ ಅತಿಥಿಯಾಗಿ ಆಗಮಿಸಿದ ಭಾರತೀಯ ನೌಕಾಸೇನೆಯ ಜೂನಿಯರ್ ಕಮಿಷನ್ಡ್ ಆಫೀಸರ್ ಸತೀಶ್ ಮಾತನಾಡಿ, ಭಾರತೀಯ ಸೇನೆ ನಮ್ಮ ದೇಶದ ಅತ್ಯಂತ ಶಕ್ತಿಶಾಲಿ ಮತ್ತು ವಿಶ್ವಾಸಾರ್ಹ ರಕ್ಷಣಾ ವ್ಯವಸ್ಥೆಗಳಲ್ಲಿ ಒಂದಾಗಿದೆ. ಇದು ಭಾರತದ ಭೂಭಾಗದ ರಕ್ಷಣೆಯ ಹೊಣೆ ಹೊತ್ತಿದೆ ಮತ್ತು ದೇಶದ ಶಾಂತಿ ಮತ್ತು ಭದ್ರತೆಗೆ ಧಕ್ಕೆ ಬರದಂತೆ ಕೆಲಸ ಮಾಡುತ್ತದೆ ಎಂದು ಹೇಳಿದರು. ಬಳಿಕ ಎನ್. ಡಿ. ಎ (ನ್ಯಾಷನಲ್ ಡಿಫೆನ್ಸ್ ಅಕಾಡೆಮಿ)ಗೆ ಸೇರಲು ಬೇಕಾದ ಅರ್ಹತೆಗಳು, ಅದರ ಪ್ರಯೋಜನಗಳು ಮತ್ತು ದೊರೆಯುವ ಅವಕಾಶಗಳ ಕುರಿತು ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ, ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ಪ್ರಾಂಶುಪಾಲರಾದ ಸಿಂಧು ವಿ. ಜಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.