ಪುತ್ತೂರು: ಮನೆಯ ಪಕ್ಕದಲ್ಲಿದ್ದ ಕೊಟ್ಟಿಗೆಗೆ ಮರವೊಂದು ಮುರಿದು ಬಿದ್ದ ಪರಿಣಾಮ ಕೊಟ್ಟಿಗೆಗೆ ಹಾನಿಯುಂಟಾಗಿ ಅಪಾರ ನಷ್ಟ ಸಂಭವಿಸಿದ ಘಟನೆ ಜು.26ರಂದು ಒಳಮೊಗ್ರು ಗ್ರಾಮದ ಕೈಕಾರದಿಂದ ವರದಿಯಾಗಿದೆ. ಕೈಕಾರ ಚಂದ್ರಶೇಖರ ನಾಯ್ಕ್ ಎಂಬವರ ಕೊಟ್ಟಿಗೆ ಮರ ಮುರಿದು ಬಿದ್ಜಿದ್ದು ಕೊಟ್ಟಿಗೆಗೆ ಅಳವಡಿಸಿದ ಶೀಟುಗಳು ತುಂಡಾಗಿದ್ದು, ಅಪಾರ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಸದಸ್ಯ ಮಹೇಶ್ ರೈ ಕೇರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
