ಕಡಬ: ಜೆಸಿಐ ಕಡಬ ಕದಂಬ, ಎಸ್.ಎಸ್.ಪಿ.ಯು ಕಾಲೇಜು ಸುಬ್ರಹ್ಮಣ್ಯ, ರೋಟರಿ ಕ್ಲಬ್ ಸುಬ್ರಹ್ಮಣ್ಯ ಇದರ ಆಶ್ರಯದಲ್ಲಿ ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮ ಸೋಮವಾರ ನಡೆಯಿತು.
ಕಾರ್ಯಕ್ರಮದಲ್ಲಿ ವಿಜಿತ್ ಸೌಂಡ್ಸ್ ಮಾಲಕ ವಿಜಿತ್ ಶೆಟ್ಟಿ ಮರ್ದಾಳ ಅವರಿಗೆ ಸಮಾರಂಭದಲ್ಲಿ ಅತ್ಯುತ್ತಮ ವ್ಯವಹಾರ ಸಾಧಕ ಪುರಸ್ಕಾರ ಪ್ರಧಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್.ಎಸ್.ಇಂಜಾಡಿ, ನಿವೃತ್ತ ಸುಭೇದಾರ್ ವಾಸುದೇವ ಗೌಡ ನಡ್ಕ, ಜೆಸಿಐ ಕಡಬ ಕದಂಬದ ಅಧ್ಯಕ್ಷೆ ವಿಶ್ರುತಾ ರಾಜೇಶ್, ಕಾಲೇಜಿನ ಪ್ರಾಚಾರ್ಯ ಸೋಮಶೇಖರ್ ನಾಯಕ್, ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ ನಾಗರಾಜ್ ಎನ್.ಕೆ, ಜೇಸಿಸ್ ವಲಯ ನಿರ್ದೇಶಕ ಕಾಶಿನಾಥ್ ಗೋಗಟೆ,ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಜಯಪ್ರಕಾಶ್ ಆರ್, ಪೂರ್ವಾಧ್ಯಕ್ಷ ಚಂದ್ರಶೇಖರ ನಾಯರ್, ಜೇಸಿಸ್ ಕಾರ್ಯದರ್ಶಿ ನವ್ಯ ಕೃಷ್ಣ, ಕಾರ್ಯಕ್ರಮ ನಿರ್ದೇಶಕ ಕೃಷ್ಣಕಾರಂತ್, ಪದಾಧಿಕಾರಿ ರಾಜೇಶ್ ಎ.ಕೆ, ಮೆಬಿನ್, ಚೇತನ್ ಪ್ರಭು,ದಿನೇಶ್ ತುಂಬೆತ್ತಡ್ಕ, ಪ್ರಣೀತಾ ಉಪಸ್ಥಿತರಿದ್ದರು.