ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾಸುಕಿ ನಾಗ ಸನ್ನಿಧಿ ಮತ್ತು ಮೂಲ ನಾಗ ಸನ್ನಿಧಿಯಲ್ಲಿ ಜು.29ರಂದು ನಾಗರ ಪಂಚಮಿಯ ವಿಶೇಷ ಕಾರ್ಯಕ್ರಮದಲ್ಲಿ ಭಕ್ತರ ಬೇಡಿಕೆಯಂತೆ ದೇವಳದ ಒಳಾಂಗಣದಲ್ಲಿ ಶ್ರೀ ದೇವರಿಗೆ ತುಪ್ಪ ದೀಪ ಸೇವೆಯು ಪ್ರಥಮ ಬಾರಿಗೆ ಆರಂಂಭಗೊಂಡಿದೆ. ಜೊತೆಗೆ ಶುದ್ದ ಕುಂಕುಮ ವಿತರಣೆಯು ಆರಂಭಗೊಂಡಿದೆ.

ಶ್ರೀ ದೇವರ ಬೆಳಗಿನ ಪೂಜೆಯ ಬಳಿಕ ತುಪ್ಪ ದೀಪ ಬೆಳಗಿಸುವ ಮೂಲಕ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಚಾಲನೆ ನೀಡಿದರು. ದೇವಳದ ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ ಪ್ರಾರ್ಥನೆ ಸಲ್ಲಿಸಿದರು. ಶ್ರೀ ದುರ್ಗಾ ಗುಡಿಯ ಮುಂದೆ ಶುದ್ದ ಕುಂಕುಮ ಅರ್ಪಣೆಗೆ ಚಾಲನೆ ನೀಡಲಾಯಿತು.
ದೇವಳದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ಅವರು ಪ್ರಾರ್ಥನೆ ಮಾಡಿದರು. ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವಿನಯ ಸುವರ್ಣ, ಸುಭಾಷ್ ರೈ ಬೆಳ್ಳಿಪ್ಪಾಡಿ, ಈಶ್ವರ ಬೆಡೇಕರ್, ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.