ಕಾಣಿಯೂರು: ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾರ್ವಾಕ ಗ್ರಾಮದಲ್ಲಿ ನಡೆದಿದೆ. ಚಾರ್ವಾಕ ಗ್ರಾಮದ ಕಂಡಿಗ ವೀರಪ್ಪ ಗೌಡ ಎಂಬವರ ಪುತ್ರ ದಾಮೋದರ ಗೌಡ (53)ಆತ್ಮಹತ್ಯೆ ಮಾಡಿಕೊಂಡವರು.
ಸೋಮವಾರ ಮುಂಜಾವಿನ ವೇಳೆ ಬೇಗ ಎದ್ದು ಯಾರಲ್ಲಿಯೂ ಮಾತನಾಡದೇ ಹೊರ ಹೋಗಿ ತನ್ನ ಸಹೋದರ ನೂತನವಾಗಿ ನಿರ್ಮಿಸಿ ಗೃಹಪ್ರವೇಶಕ್ಕೆ ತಯಾರಾಗಿದ್ದ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿಯ ಅನಾರೋಗ್ಯದಿಂದ ಕಳೆದ ಕೆಲವು ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಅವರು ಜೀವನದಲ್ಲಿ ಜಿಗುಪ್ಸೆ ಗೊಂಡು ಆತ್ಮಹತ್ಯೆ ಮಾಡಿಕೊಡಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಮೃತರ ಸಹೋದರ ವೆಂಕಟೇಶ್ ಕಡಬ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಕಡಬ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಮೃತರು ಪತ್ನಿ ವಸಂತಿ, ಪುತ್ರ ಗಗನ್ ಅವರನ್ನು ಅಗಲಿದ್ದಾರೆ.