ಪುತ್ತೂರು: ಕಾರ್ಗಿಲ್ ಕದನದಲ್ಲಿ ಭಾಗವಹಿಸಿ ಹುತಾತ್ಮರಾದ ಯೋಧ ಪರಮೇಶ್ವರ ಗೌಡ ಅವರ ಮನೆಗೆ ತೆರಳಿ ಅವರ ಪತ್ನಿಯನ್ನು ಗೌರವಿಸುವ ಮೂಲಕ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪುತ್ತೂರು ಕಾರ್ಗಿಲ್ ವಿಜಯ ದಿವಸ್ ಆಚರಣೆ ಮಾಡಿದರು.

ಪರಮೇಶ್ವರ ಗೌಡ ಅವರ ಪತ್ನಿ ಪುಷ್ಪಾವತಿ ಅವರನ್ನು ಎಬಿವಿಪಿಯಿಂದ ಗೌರವಿಸಿ ಅವರಿಂದ ಆಶೀರ್ವಾದ ಪಡೆಯಲಾಯಿತು. ಈ ಸಂದರ್ಭದಲ್ಲಿ ಅಭಾವಿಪ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಕು.ಮಂದಾರ ಬಾಳುಗೋಡು, ಪುತ್ತೂರು ಜಿಲ್ಲಾ ಸಂಚಾಲಕ ಸಮನ್ವಿತ್ ಕೆ, ವಿಭಾಗ ವಿದ್ಯಾರ್ಥಿನಿ ಪ್ರಮುಖ್ ಹಾಗೂ ರಾಜ್ಯ ಕಾರ್ಯಸಮಿತಿ ಸದಸ್ಯೆ ಕು.ಅಮೃತಾಂಬ, ಜಿಲ್ಲಾ ವಿದ್ಯಾರ್ಥಿನಿ ಪ್ರಮುಖ್ ಹಾಗೂ ರಾಜ್ಯ ಕಾರ್ಯಕಾರಣಿ ಸದಸ್ಯೆ ಕು. ಸಿಂಚನ ಮತ್ತು ಕಾರ್ಯಕರ್ತರಾದ ಮೋನಿಶ್ ಉಪಸ್ಥಿತರಿದ್ದರು.