ಪುಣಚ: ಇಲ್ಲಿನ ದಲ್ಕಾಜೆಗುತ್ತು ಕುಟುಂಬಸ್ಥರು ಆರಾಧಿಸಿಕೊಂಡು ಬರುತ್ತಿರುವ ನಾಗಸನ್ನಿದಿಯಲ್ಲಿ ನಾಗರ ಪಂಚಮಿ ಆಚರಣೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜು.29ರಂದು ನಡೆಯಿತು.
ಪುಣಚ ನಾರಾಯಣ ಬನ್ನಿಂತಾಯರ ಪೌರೋಹಿತ್ಯದಲ್ಲಿ ನಾಗದೇವರಿಗೆ ವಿವಿಧ ಅಭಿಷೇಕ, ತಂಬಿಲಸೇವೆ ಮಹಾಪೂಜೆ ಪ್ರಸಾದ ವಿತರಣೆ ನಡೆಯಿತು. ದಲ್ಕಾಜೆಗುತ್ತು ಕುಟುಂಬಸ್ಥರು, ಸ್ಥಳೀಯರು ಭಕ್ತಾಧಿಗಳು ಪಾಲ್ಗೊಂಡರು.