ಪಡುಮಲೆ: ಎರುಕೊಟ್ಯ ನಾಗಬ್ರಹ್ಮ ಕ್ಷೇತ್ರದಲ್ಲಿ ನಾಗರ ಪಂಚಮಿ ಆಚರಣೆ

0

ಬಡಗನ್ನೂರು: ಪಡುಮಲೆ ಎರುಕೊಟ್ಯ ನಾಗಬ್ರಹ್ಮ ಕ್ಷೇತ್ರದಲ್ಲಿ ನಾಗರ ಪಂಚಮಿ ಆಚರಣೆ ಜು.29ರಂದು ನಡೆಯಿತು. ಶ್ರೀ ಸನ್ನಿದಿಯಲ್ಲಿ ಬೆಳಗ್ಗೆ ಗಂ 7.30 ಶೀ ನಾಗದೇವರಿಗೆ ಹಾಲು ಮತ್ತು ಸೀಯಾಳ ಅಭಿಷೇಕ ನಡೆಯಿತು. ಬಳಿಕ ಶ್ರೀ ನಾಗದೇವರಿಗೆ ಮತ್ತು ನಾಗಬ್ರಹ್ಮದೇವರಿಗೆ ವಿಶೇಷ ತಂಬಿಲ ಸೇವೆ ನಡೆದು ಮಹಾ ಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು.

ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕ ಮಹಾಲಿಂಗ ಭಟ್ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ನೆರವೇರಿತು.

ಈ ಸಂದರ್ಭದಲ್ಲಿ ಕೋಟಿ ಚೆನ್ನಯ ಸಂಚಾಲನ ಸಮಿತಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಪ್ರಧಾನ ಕಾರ್ಯದರ್ಶಿ ಶ್ರೀಧರ ಪಟ್ಲ, ಟ್ರಸ್ಟಿ ಚರಣ್, ಅಶೋಕ್ ಪುತ್ತೂರು ಸಹಿತ ಸಹಸ್ರಾರು ಭಕ್ತಾದಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here