ಪುತ್ತೂರು: ಕೊೖಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಉಪನಿರ್ದೇಶಕರಾಗಿ ಡಾ.ಕೆ.ಬಿ ಚಿದಾನಂದರವರು ವರ್ಗಾವಣೆಗೊಂಡು ಅಧಿಕಾರ ಸ್ವೀಕರಿಸಿದ್ದಾರೆ.
ಕೊಡುಗು ಜಿಲ್ಲೆಯ ಮಡಿಕೇರಿ ಪಾಲಿಕ್ಲಿನಿಕ್ನಲ್ಲಿ ಮುಖ್ಯ ಪಶುವೈದ್ಯಾಧಿಕಾರಿಯಾಗಿದ್ದ ಡಾ. ಕೆ.ಬಿ ಚಿದಾನಂದರವರು ಉಪನಿರ್ದೇಶಕರಾಗಿ ಮುಂಭಡ್ತಿ ಪಡೆದು ವರ್ಗಾವಣೆಗೊಂಡಿರುತ್ತಾರೆ.
ಸಂಪಾಜೆಯ ಚೆಂಬು ನಿವಾಸಿಯಾಗಿರುವ ಡಾ.ಕೆ.ಬಿ ಚಿದಾನಂದರವರು ಕೊಡುಗು ಜಿಲ್ಲೆಯ ಸುಂಟಿಕೊಪ್ಪ, ವಿರಾಜಪೇಟೆಯ ಸಿದ್ದಾಪುರ, ಮಡಿಕೇರಿ ಜಿಲ್ಲಾ ಪಶುವೈದ್ಯಕೀಯ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸಿ, ಇದೀಗ ಉಪನಿರ್ದೇಶಕರಾಗಿ ವರ್ಗಾವಣೆಗೊಂಡಿದ್ದಾರೆ.
