ಪುತ್ತೂರು ಶ್ರೀ ದೇವತಾ ಸಮಿತಿ ಪುತ್ತೂರು ಇದರ ಆಶ್ರಯದಲ್ಲಿ ನಡೆಯುವ 68ನೇ ವರ್ಷದ ಮಹಾ ಗಣೇಶೋತ್ಸವದ ವಿಗ್ರಹದ ರಚನೆಗೆ ಚಾಲನೆ ನೀಡಲಾಯಿತು.

ಇದೇ ಸಂದರ್ಭದಲ್ಲಿ ಸಾರ್ವಜನಿಕ ಮಹಾಗಣೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು. ಪುತ್ತೂರು ಕೋರ್ಟು ರಸ್ತೆಯಲ್ಲಿರುವ ವಿಶ್ವ ಸಂಕೀರ್ಣದಲ್ಲಿ ವೇದಮೂರ್ತಿ ಸುಬ್ರಹ್ಮಣ್ಯ ಹೊಳ್ಳ ರವರ ನೇತೃತ್ವದಲ್ಲಿ ಶ್ರೀದೇವತಾ ಸಮಿತಿಯ ಅಧ್ಯಕ್ಷ ಅಭಿಜಿತ್ ಶೆಟ್ಟಿ ನೆಲ್ಲಿಕಟ್ಟೆ ರವರ ಅಧ್ಯಕ್ಷತೆಯಲ್ಲಿ ವಿಗ್ರ ರಚನೆಗೆ ಮುಹೂರ್ತ ನಡೆಸಲಾಯಿತು.
ಶಿಲ್ಪಿ ರಮೇಶ್ ಪೂಜಾರಿ ಶ್ರೀ ಗಣೇಶ ನ ವಿಗ್ರಹದ ರಚನಾ ಕಾರ್ಯಕ್ಕೆ ಚಾಲನೆ ನೀಡಿದರು. ಪ್ರತಿವರ್ಷ ನಾಗರ ಪಂಚಮಿಯ ದಿನದಂದೇ ಕಿಲ್ಲೆ ಮೈದಾನದ ಗಣೇಶೋತ್ಸವಕ್ಕೆ ವಿಗ್ರಹ ರಚನೆ ಮುಹೂರ್ತ ಮಾಡಲಾಗುತ್ತಿದೆ.
ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ
ಪುತ್ತೂರು ಕಿಲ್ಲೆ ಮೈದಾನದಲ್ಲಿ ಏಳು ದಿನಗಳ ಕಾಲ ನಡೆಯುವ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ಶ್ರೀದೇವತಾ ಸಮಿತಿಯ ಅಧ್ಯಕ್ಷ ಅಭಿಜಿತ್ ಶೆಟ್ಟಿ ನೆಲ್ಲಿಕಟ್ಟೆ ರವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಇದು ಗಣೇಶನ ಸಂಕಲ್ಪದಂತೆ ನಡೆಯುವ ಉತ್ಸವವಾಗಿದೆ ಕಳೆದ 67 ವರ್ಷಗಳಿಂದ ಅತ್ಯಂತ ಯಶಸ್ವಿಯಾಗಿ ಗಣೇಶೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದ್ದು ಇದೀಗ 68 ವರ್ಷದ ಸಾರ್ವಜನಿಕ ಗಣೇಶೋತ್ಸವವು ಗಣೇಶನ ಅನುಗ್ರಹದಿಂದ ಯಶಸ್ವಿಯಾಗಿ ನಡೆಯುವಂತಾಗಲು ಪ್ರತಿಯೊಬ್ಬರ ಸಹಕಾರ ಅಗತ್ಯವಿದೆ ಎಂದರು.

ಈ ಸಂದರ್ಭದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಪ್ರಧಾನ ಕಾರ್ಯದರ್ಶಿ ದಿನೇಶ್ ಕುಲಾಲ್ ಪಿ.ವಿ. ಕೋಶಾಧಿಕಾರಿ ಶ್ರೀಧರ ನಾಯಕ್. ಗೀತಾ ಶೆಟ್ಟಿ ನೆಲ್ಲಿಕಟ್ಟೆ, ಯು.ಪಿ. ರಾಮಕೃಷ್ಣ, ದಿನಕರ ಶೆಟ್ಟಿ ನೆಲ್ಲಿಕಟ್ಟೆ, ಗಣಪತಿ ಪೈ, ರತ್ನಾಕರ ಆಚಾರ್ಯ, ಸುದರ್ಶನ್ ಶೆಟ್ಟಿ ಶಾಂತಿನಾಥ ಪ್ರೆಸ್ ವಸಂತ ನಾಯಕ್, ಗಣೇಶ ಶೆಟ್ಟಿ ನೆಲ್ಲಿಕಟ್ಟೆ,ಸುದೇಶ್ ಕುಮಾರ್ ಚಿಕ್ಕಪುತ್ತೂರು, ಸುರೇಂದ್ರ ನೆಹರು ನಗರ, ಶಿವರಾಮ ರೈ, ಬಿ ಕಿಟ್ಟಣ್ಣ ಗೌಡ, ವಿಗ್ರಹ ರಚನೆಯ ಸಹಾಯಕ ರಾಧೇಶ ಆಚಾರ್ಯ, ಪ್ರಜ್ವಲ್ ಶೆಟ್ಟಿ ಮಚ್ಚಿ ಮಲೆ, ವಿಶ್ವ ಸಂಕೀರ್ಣದ ಮಾಲಕ ದಾಮೋದರ ಆಚಾರ್ಯ, ರಾಜೇಶ್, ವಸಂತ, ಮೊದಲಾದವರು ಉಪಸ್ಥಿತರಿದ್ದರು.
ಪ್ರಥಮ ಬಾರಿಗೆ ಬಾಲ ಗಣಪತಿ ಹೋಮ
ಕಿಲ್ಲೆ ಮೈದಾನದಲ್ಲಿ ನಡೆಯುವ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಪ್ರಥಮ ಬಾರಿಗೆ ಲೋಕಕಲ್ಯಾಣಾರ್ಥದ ಉದ್ದೇಶದೊಂದಿಗೆ ಬಾಲ ಗಣಪತಿ ಹೋಮವು ಜರಗಲಿದ. ಬಾಲ ಗಣಪತಿ ಹೋಮವು ಗಣಪತಿಯ ಬಾಲರೂಪದ ಉಪಾಸನೆ ಯಾಗಿರುತ್ತದೆ ಲೋಕಕಲ್ಯಾಣಾರ್ಥದ ಉದ್ದೇಶದೊಂದಿಗೆ ವೈಯುಕ್ತಿಕವಾಗಿ ಸುಖ ಸಮೃದ್ಧಿ ನೀಡುತ್ತದೆ. ಮನಸ್ಸನ್ನು ಉದ್ವೇಗ ಮುಕ್ತಗೊಳಿಸಿ ಜೀವನದಲ್ಲಿ ಎದುರಾಗುವ ಅಡೆತಡೆಗಳು ನಕರಾತ್ಮಕ ಶಕ್ತಿಗಳ ಸಮಸ್ಯೆಗಳು ಮಕ್ಕಳಿಗೆ ಎದುರಾಗುವ ತೊಂದರೆಗಳಿಗೆ ಪರಿಹಾರ ದೊರೆಯುತ್ತದೆ ಹೋಮವು ಆಗಷ್ಟು 31 ಮುಂಜಾನೆ 4:45ಕ್ಕೆ ಆರಂಭವಾಗಿ ಸೂರ್ಯೋದಯದ ಮೊದಲು ಪೂರ್ಣಾಹುತಿ ಯಾಗುತ್ತದೆ ಎಂದು ದೇವತಾ ಸಮಿತಿಯ ಅಧ್ಯಕ್ಷ ಅಭಿಜಿತ್ ಶೆಟ್ಟಿ ನೆಲ್ಲಿಕಟ್ಟೆ ರವರು ತಿಳಿಸಿದ್ದಾರೆ.