ಪುತ್ತೂರು: ಪುತ್ತೂರು ತಾಲೂಕಿನಲ್ಲಿ ಹುತ್ತಕ್ಕೆ ಪೂಜೆ ಸಲ್ಲುವ ಏಕೈಕ ಕ್ಷೇತ್ರ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜು.29ರಂದು ನಾಗರ ಪಂಚಮಿ ಅಂಗವಾಗಿ ನಾಗ ದೇವರಿಗೆ ಹಾಲಿನ ಅಭಿಷೇಕ, ಸೀಯಾಳ ಅಭಿಷೇಕ, ನಾಗ ತಂಬಿಲ ನಡೆಯಿತು.




ಬಳಿಕ ಶ್ರೀ ಮಹಾಗಣಪತಿ ಹಾಗೂ ಶ್ರೀ ಸುಬ್ರಹ್ಮಣ್ಯ ದೇವರಿಗೆ ವಿಶೇಷ ಪೂಜೆ ನಡೆದು ಪ್ರಸಾದ ವಿತರಣೆ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಸಂತೋಷ್ ಕುಮಾರ್ ರೈ ನಳೀಲು, ಮೊಕ್ತೇಸರರಾದ ಎನ್.ಗಿರಿಜಾ ರೈ,ಎನ್.ಚಂದ್ರಶೇಖರ ರೈ, ಮೋಹನ್ ದಾಸ್ ರೈ ನಳೀಲು, ಎನ್.ಸುಚೇತಾ ಶೆಟ್ಟಿ,ಅರುಣ್ ಕುಮಾರ್ ರೈ,ಸತೀಶ್ ರೈ ,ಪ್ರವೀಣ್ ಕುಮಾರ್ ರೈ ,ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ವಿಲಾಸ್ ರೈ ಪಾಲ್ತಾಡು, ಸುಬ್ರಾಯ ಗೌಡ ಪಾಲ್ತಾಡಿ,ಸುನೀಲ್ ರೈ ಪಾಲ್ತಾಡು ,ಪ್ರಧಾನ ಕಾರ್ಯದರ್ಶಿ ಸುರೇಶ್ಚಂದ್ರ ರೈ ಪಾಲ್ತಾಡಿ ಮೊದಲಾದವರಿದ್ದರು.
ಇಂದು ಷಷ್ಠಿ ಪೂಜೆ, ಅನ್ನಸಂತರ್ಪಣೆ
ಜು.30ರಂದು ದೇವಸ್ಥಾನದಲ್ಲಿ ಮಧ್ಯಾಹ್ನ ತಿಂಗಳ ಶುದ್ದ ಷಷ್ಠಿ ಪೂಜೆ ,ಅನ್ನ ಸಂತರ್ಪಣೆ ನಡೆಯಲಿದೆ. ಭಕ್ತಾದಿಗಳು ದೇವತಾ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು ತಿಳಿಸಿದ್ದಾರೆ.