ಪುತ್ತೂರು: Institute of Chartered Accountants of India (ICAI) ಇವರು ನಡೆಸಿದ ಚಾರ್ಟರ್ಡ್ ಅಕೌಂಟೆಟ್ (CA) ಪರೀಕ್ಷೆಯಲ್ಲಿ ಪುತ್ತೂರು ತಾಲೂಕಿನ ಮಾಡಾವು ನಿವಾಸಿ ಕೃಷ್ಣಮೂರ್ತಿ ಮತ್ತು ವಿದ್ಯಾ ದಂಪತಿಗಳ ಪುತ್ರಿ ಸಾತ್ವಿಕಾ ಮಾಡಾವು ಇವರು ತೇರ್ಗಡೆ ಹೊಂದಿದ್ದಾರೆ.
ಸಾತ್ವಿಕಾ ಇವರು ಪ್ರಾಥಮಿಕ ವಿದ್ಯಾಭಾಸವನ್ನು ಸಾಂದೀಪನಿ ಮತ್ತು ಬೆಥನಿ ಶಾಲೆಗಳಲ್ಲಿ ಪೂರೈಸಿ ಪ್ರೌಢ ಹಾಗೂ ಪಿಯುಸಿ ವಿದ್ಯಾಭಾಸವನ್ನು ಸೈಂಟ್ ಫಿಲೋಮಿನಾ ವಿದ್ಯಾಸಂಸ್ಥೆಗಳಲ್ಲಿ ಪಡೆದು ಸಿ.ಏ ವಿದ್ಯಾಭಾಸವನ್ನು ಬೆಂಗಳೂರಿನ ವಿಷ್ಣು ದಯ ಮತ್ತು ಕೊ ಸಂಸ್ಥೆಯಲ್ಲಿ ಪೂರೈಸಿ 2025 ರ ಮೇ ತಿಂಗಳಿನಲ್ಲಿ ಸಿ ಎ ಪದವಿ ಪಡೆದಿರುತ್ತಾರೆ.