ಮಾನವ ಕಳ್ಳಸಾಗಣಿಕೆ ತಡೆ ದಿನಾಚರಣೆ ಸರಣಿ ಕಾರ್ಯಕ್ರಮದ ಉದ್ಘಾಟನೆ – ಪ್ರತಿಜ್ಞಾವಿಧಿ ಬೋಧನೆ

0

*ಕಾನೂನಿನ ಜೊತೆ ಸಾರ್ವಜನಿಕರ ಸಹಭಾಗಿತ್ವವಿರಬೇಕು – ನ್ಯಾಯಾಧೀಶೆ ಸರಿತಾ
*ಅಪರಾಧ ತಡೆಗೆ ಕಾನೂನು ಅರಿವು ಅಗತ್ಯ – ನವೀನ್ ಭಂಡಾರಿ ಹೆಚ್
*ಸಾಮಾನ್ಯ ಜನರಿಗೆ ಅರಿವು ಮೂಡಿದಷ್ಟು ಜಾಗೃತಿ – ಜಿ ಜಗನ್ನಾಥ
*ಎಲ್ಲಾ ಇಲಾಖೆಗಳು ಕೈಜೋಡಿಸಿದರೆ ಭಾರತ ಶಸಕ್ತವಾಗಲಿದೆ – ಗೌರೀಶಚಂದ್ರ ಶಾನ್ ಬೋಗ್

ಪುತ್ತೂರು: ನ್ಯಾಯಾಧೀಶರಾಗಿ ನಮ್ಮ‌ ಕರ್ತವ್ಯ ಎಷ್ಟಿದೆಯೋ ಇದರ ಜೊತೆಗೆ ಎಲ್ಲರ ಕೈ ಜೋಡಿಸುವಿಕೆಯಿಂದ ಅಪರಾಧ ತಡೆಗಟ್ಟಲು ಸಾಧ್ಯ ಎಂದು ದ.ಕ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಧೀಶ ಸರಿತಾ ಡಿ ಅವರು ಹೇಳಿದರು.


ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಂಗಳೂರು ತಾಲೂಕು ಕಾನೂನು ಸೇವೆಗಳ ಸಮಿತಿ, ಪುತ್ತೂರು ಹಾಗೂ ಪುತ್ತೂರು ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ತಾಲೂಕು ಪಂಚಾಯತ್ ಪುತ್ತೂರು, ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು, ಅನಿಕೇತನ ಎಜುಕೇಶನಲ್ ಟ್ರಸ್ಟ್ ಹಾಗೂ ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ಇವರ ಸಹಭಾಗಿತ್ವದಲ್ಲಿ ಮಾನವ ಕಳ್ಳಸಾಗಾಣಿಕೆ ತಡೆ ದಿನಾಚರಣೆ ಅಂಗವಾಗಿ 8 ದಿನಗಳು ವಿವಿಧ ಕಡೆ ನಡೆಯುವ ಸರಣಿ ಕಾರ್ಯಕ್ರಮವನ್ನು ಪುತ್ತೂರು ನ್ಯಾಯಾಲಯ ಸಂಕೀರ್ಣ ಪರಾಶರ ಸಭಾಂಗಣದಲ್ಲಿ ಜು.30ರಂದು ಅವರು ಉದ್ಘಾಟಿಸಿ ಮಾತನಾಡಿದರು. ಮಾನವಿಯ ಹಕ್ಕುಗಳ ಧಕ್ಕೆಗೆ ಕುಂದನ್ನು ಉಂಟು ಮಾಡುವುದು ಘೋರ ಅಪರಾಧ. ಇದನ್ನು ತಡೆಗಟ್ಟಲು ಹಲವು ಕಾನೂನು ಜಾರಿಯಲ್ಲಿದೆ. ಮಹಿಳಾ ಮತ್ತು ಅನೈತಿಕ ಕಳ್ಳ ಸಾಗಣಿಕೆ ಕಾನೂನಿಂದ ಮಾತ್ರ ತಡೆಗಟ್ಟಲು ಸಾಧ್ಯವಿಲ್ಲ. ಸಾರ್ವಜನಿಕರ ಸಹಕಾರವೂ ಅಗತ್ಯ. ಸಮಾಜದ ಮುಖ್ಯ ರತ್ನವಾಗಿರುವ ಮಹಿಳೆ ಮತ್ತು ಮಕ್ಕಳು. ಅವರ ಮೇಲಿನ ಗಂಭೀರ ಅಪರಾಧ ತಡೆಯಬೇಕು. ಇಂತಹ ಅಪರಾಧ ತಡೆಯಲು ನ್ಯಾಯಾಧೀಶರಾಗಿ ನಮ್ಮ‌ ಕರ್ತವ್ಯದ ಜೊತೆಗೆ ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದರು.


ಅಪರಾಧ ತಡೆಗೆ ಕಾನೂನು ಅರಿವು ಅಗತ್ಯ:
ಮುಖ್ಯ ಅತಿಥಿಯಾಗಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಹೆಚ್ ಅವರು ಮಾತನಾಡಿ ಸಾರ್ವಜನಿಕರು ಕಾನೂನು ತಿಳಿದು ಕೊಂಡಾಗ ಅಪರಾಧ ತಡೆಯಲು ಸಾಧ್ಯ. ಪ್ರತಿಯೊಬ್ಬ ನಾಗರಿಕರು ಕಾನೂನು‌ ಪಾಲಿಸುವುದು ಕರ್ತವ್ಯ ಎಂದರು.


ಸಾಮಾನ್ಯ ಜನರಿಗೆ ಅರಿವು ಮೂಡಿದಷ್ಟು ಜಾಗೃತಿ:
ಅಧ್ಯಕ್ಷತೆ ವಹಿಸಿದ ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ ಅವರು ಮಾತನಾಡಿ, ಮಾನವ ಕಳ್ಳಸಾಗಣಿಕೆ ತಡೆ ಕಾರ್ಯಕ್ರಮವು ಸರಣಿಯಾಗಿ ನಡೆಯಲಿದೆ. ಸಾಮಾನ್ಯ ಜನರಿಗೆ ಕಾನೂನಿನ ಅರಿವು ಮೂಡಿಸಿ ಜಾಗೃತಿಯನ್ನುಂಟು ಮಾಡಲು ಈ ಕಾರ್ಯಕ್ರಮ ನಡೆಯುತ್ತದೆ. ಮಾನವ ಕಳ್ಳ ಸಾಗಾಣಿಕೆ ತಡೆಯಲು ನಿಯೋಜಿಸಲ್ಪಟ್ಟ ಅಧಿಕಾರಿಗಳಿಂದ ಮಾತ್ರ ಸಾಧ್ಯವಿಲ್ಲ. ನಾವೆಲ್ಲ ಕೈ ಜೋಡಿಸಿದಾಗ ಇಂತಹ ಅಪರಾಧ ನಿರ್ಮೂಲನೆ ಆಗುತ್ತದೆ. ಜನರಿಗೆ ಮಾಹಿತಿ ಪಸರಿಸಿದಷ್ಟು ಜಾಗೃತಿ ಉಂಟಾಗುತ್ತದೆ. ಕೇವಲ ಕಾರ್ಯಕ್ರಮದ ಮೂಲಕ ಪಿಡುಗು ನಿಲ್ಲಿಸಲು ಸಾಧ್ಯವಿಲ್ಲ ಹಾಗಾಗಿ ಪತ್ರಿಕಾ ಮಾಧ್ಯಮವೂ ಜವಾಬ್ದಾರಿಯುತ ಕೆಲಸ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.


ಎಲ್ಲಾ ಇಲಾಖೆಗಳು ಕೈಜೋಡಿಸಿದರೆ ಭಾರತ ಶಸಕ್ತವಾಗಲಿದೆ:
ವಕೀಲರ ಸಂಘದ ಮಾಜಿ ಕೋಶಾಧಿಕಾರಿ ಗೌರೀಶಚಂದ್ರ ಶಾನುಭೋಗ್‌ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ ಮಾನವ ಕಳ್ಳಸಾಗಣಿಕೆಯಲ್ಲಿ
ಕರ್ನಾಟಕದ ವಿಷಯಕ್ಕೆ ಬಂದಾಗ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಇಂತಹ ಅಪರಾಧ ಕಡಿಮೆ. ದೊಡ್ಡ ಸಿಟಿಗಳಲ್ಲಿ ವಲಸೆ ಬರುವವರು ಹೆಚ್ಚು. ಆಗ ಇಂತಹ ಘಟನೆಗಳು ಜಾಸ್ತಿ ಆಗುತ್ತದೆ. ಬಹುತೇಕ ಅಪರಾಧ ನಡೆಸುವವರು ಸ್ಲೀಪರ್ ಸೆಲ್ ಗಳಲ್ಲಿರುತ್ತಾರೆ‌. ಇಂತಹ ಸಂದರ್ಭ ಮಕ್ಕಳನ್ನು ಬಹಳ ಎಚ್ಚರವಾಗಿ ಮುನ್ನಡೆಸಬೇಕು. ಇತ್ತೀಚಿಗಿನ ದಿನ ಮಾದಕ ವಸ್ತು ಜಾಲ ಬಹಳ ದೊಡ್ಡ ಮಟ್ಟದಲ್ಲಿ ಪಸರಿಸಿದೆ. ಡ್ರಗ್ ಪ್ಲೆಡರ್ ಮುಂದಿನ ಜನಾಂಗವನ್ನು ಹಾಳು ಮಾಡುತ್ತಾರೆ. ಇದರಲ್ಲಿ ಪೊಲೀಸ್ ಇಲಾಖೆಯ ಜವಾಬ್ದಾರಿ ಹೆಚ್ಚು ಇದೆ. ಇದರ ಜೊತೆ ಸಾರ್ವಜನಿಕರ ಸಹಭಾಗಿತ್ವ ಬೇಕು. ಆದರೆ ಇಲಾಖೆ ಮಲಗಿದಂತೆ ನಟಿಸಿದರೆ ಏನೂ ಪ್ರಯೋಜನವಿಲ್ಲ. ಇವತ್ತು ಡ್ರಗ್ ಪಿಡುಗು ದೇಶದ ಪಿಡುಗಲ್ಲ ಅಂತರಾಷ್ಟ್ರೀಯ ಪಿಡುಗು. ಲಕ್ಷಗಟ್ಟಲೆ ಈ ವಿಷ ವರ್ತುಲದಲ್ಲಿ ಬಿದ್ದಿದ್ದಾರೆ. ಡ್ರಗ್ ಮತ್ತು ಮೊಬೈಲ್ ಬಳಕೆ ಇವತ್ತಿನ ದಿನದ ದೊಡ್ಡ ಸಮಸ್ಯೆ ಎಂದರು.


ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ವೃತ್ತಿಪರ ನಿರ್ದೇಶಕ ಬಿ. ವಸಂತಶಂಕರ ಮಾನವ ಕಳ್ಳ ಸಾಗಣಿಕೆ ಎಂದರೆನು ಎಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ನಮ್ಮ‌ಸುತ್ತಮುತ್ತ ಎನಾಗುತ್ತಿದೆ ಎಂಬುದನ್ನು ಜಾಗೃತವಾಗಿ ಪರಿಶೀಲಿಸಿದಾಗ ಅಪರಾಧ ತಡೆಗಟ್ಟಬಹುದು ಎಂದರು.


ಪ್ರತಿಜ್ಞಾವಿಧಿ ಬೋಧನೆ:
ಮಾನವ ಕಳ್ಳ ಸಾಗಾಣಿಕೆ ತಡೆಗಟ್ಟಲು ಸಂವಿಧಾನಬದ್ದವಾಗಿ ಕೈ ಜೋಡಿಸುವ ನಿಟ್ಟಿನಲ್ಲಿ ಪ್ರತಿಜ್ಞಾವಿಧಿ ಕೈಗೊಂಡರು. ಪುತ್ತೂರು ಜೆ.ಎಂ.ಎಫ್‌ಸಿ ಮತ್ತು ಹೆಚ್ಚುವರಿ ಹಿರಿಯ ವ್ಯವಹಾರಿಕ ನ್ಯಾಯಾಧೀಶ ದೇವರಾಜ್ ವೈ. ಹೆಚ್, ಪ್ರಧಾನ ವ್ಯವಹಾರಿಕ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್‌ಸಿ, ಕಾನೂನು ಸೇವಾ ಸಮಿತಿ‌ ಸದಸ್ಯ ಪುತ್ತೂರು ಶಿವಣ್ಣ ಹೆಚ್.ಆರ್, ಕರ್ನಾಟಕ ಪತ್ರಕರ್ತರ ಪುತ್ತೂರು ತಾಲೂಕಿನ ಅಧ್ಯಕ್ಷ ಶ್ರೀಧರ ರೈ ಕೋಡಂಬು, ಪುತ್ತೂರು ವಕೀಲರ ಸಂಘದ ಉಪಾಧ್ಯಕ್ಷ ಮೋನಪ್ಪ ಎಮ್ ಪುತ್ತೂರು ವಕೀಲರ ಸಂಘದ ಜತೆ ಕಾರ್ಯದರ್ಶಿ ಮಮತ ಸುವರ್ಣ ಬಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಕೀಲೆ ಕು ರಾಜೇಶ್ವರಿ ಪ್ರಾರ್ಥಿಸಿದರು. ಪುತ್ತೂರು ವಕೀಲರ ಸಂಘದ ಖಜಾಂಚಿ ಮಹೇಶ್ ಸವಣೂರು ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕ ವಕೀಲ ಕೃಷ್ಣಪ್ರಸಾದ್ ನಡ್ಸಾರು ವಂದಿಸಿ ಮಾತನಾಡಿ, ಕಾನೂನು ಸೇವಾ ಪ್ರಾಧಿಕಾರ ಜನರ ಕಾನೂನಿಗೆ ಸಂಬಂಧಿಸಿ ಸಹಕಾರ ನೀಡಲಾಗುವುದು ಎಂದರು. ತಾ.ಪಂ ಎನ್ ಅರ್ ಎಲ್ ಎಮ್ ನ ಜಗತ್, ಪಿಡಿಒ ರವಿಚಂದ್ರ, ಹಿರಿಯ ವಕೀಲರು, ಸಂಜೀವಿನಿ ಒಕ್ಕೂಟದ ಸದಸ್ಯರು, ಕರ್ನಾಟಕ ಪತ್ರಕರ್ತರ ಸಂಘದ ಪದಾಧಿಕಾರಿಗಳು, ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.ನಿಲೀಶ ಪ್ರೀಮಾ ಮಾರ್ಟಿಸ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here