ಆಲಂಕಾರು:ಆಲಂಕಾರು ಜೇಸಿಐ ಉಪಾಧ್ಯಕ್ಷೆ ಜೇಸಿ ಧನ್ಯಶ್ರೀ ಪ್ರಶಾಂತ್ ರೈ ಮನವಳಿಕೆಯವರಿಗೆ ಪ್ರತಿ ಜೇ.ಸಿ.ಐ ಘಟಕಕ್ಕೆ ನೀಡುವ ವಲಯದ ಸಾಧನಾ ಶ್ರೀ ಪ್ರಶಸ್ತಿ ದೊರೆತಿದೆ.
ಜೇಸಿಐ ಮಡಂತ್ಯಾರಿನ ಆತಿಥ್ಯದಲ್ಲಿ ನಡೆದ ಜೇಸಿಐ ಭಾರತದ ವಲಯ 15ರ ವಲಯ ವ್ಯವಹಾರ ಸಮ್ಮೇಳನದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಜೇಸಿಐ ಆಲಂಕಾರು ಘಟಕದ ಉಪಾಧ್ಯಕ್ಷೆ ಧನ್ಯಶ್ರೀ ಪಿ.ರೈ ಆಲಂಕಾರಿನಲ್ಲಿ ‘ಪ್ರನ್ಯಸ್ ಫ್ಯಾನ್ಸಿ ಮತ್ತು ಗಿಫ್ಟ್ ಸೆಂಟರ್ ಎಂಬ ಉದ್ಯಮವನ್ನು ನಡೆಸುತ್ತಿದ್ದಾರೆ.ಎಂ.ಎ,ಬಿ.ಎಡ್ ಪದವೀಧರೆಯಾಗಿರುವ ಇವರು ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ 5 ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ.2020ರಲ್ಲಿ ಆಲಂಕಾರಿನಲ್ಲಿ ತಮ್ಮ ಸ್ವಂತ ಉದ್ಯಮವನ್ನು ನಡೆಸುತ್ತಿದ್ದಾರೆ.