ರಾಮಕುಂಜ: ಉಮ್ರಾ ಯಾತ್ರೆಗೆ ಹೊರಟಿರುವ ಹಸನ್ ನೆಲ್ಯೋಟ್ಟು, ಆದಂ ಕುಂಞಿ ನೀರಾಜೆ, ಯೂಸುಫ್ ನೀರಾಜೆ ಹಾಗೂ ಅಬ್ಬಾಸ್ ನೀರಾಜೆ ಇವರಿಗೆ ಆತೂರು ಬದ್ರಿಯಾ ಜುಮಾ ಮಸೀದಿ ಹಾಗೂ ಎಸ್‌ಕೆಎಸ್‌ಎಸ್‌ಎಫ್ ಆತೂರು ಶಾಖೆ ವತಿಯಿಂದ ಸನ್ಮಾನ ಕಾರ್ಯಕ್ರಮ ತದ್ಬೀರುಲ್ ಇಸ್ಲಾಂ ಮದ್ರಸದಲ್ಲಿ ನಡೆಯಿತು.
ಬಿ.ಕೆ.ಅಬ್ದುಲ್ ರಝಾಕ್ ಅಧ್ಯಕ್ಷತೆ ವಹಿಸಿದ್ದರು. ಝಕರಿಯಾ ಮುಸ್ಲಿಯಾರ್ ಸ್ವಾಗತಿಸಿದರು. ಸೆಯ್ಯದ್ ಜುನೈದ್ ಜಿಫ್ರೀ ತಂಙಳ್‌ರವರು ದುಆ ನೆರವೇರಿಸಿದರು. ಜಮಾಅತಿನ ಅಧ್ಯಕ್ಷರಾದ ಅಹ್ಮದ್ ಕುಂಞಿ, ಎಸ್‌ಕೆಎಸ್‌ಎಸ್‌ಎಫ್ ಕೊಯಿಲ ಕ್ಲಸ್ಟರ್‌ನ ಅಧ್ಯಕ್ಷ ಸಿದ್ದೀಕ್, ಆತೂರುಬೈಲ್‌ನ ಅಧ್ಯಕ್ಷ ಎ.ಕೆ.ಬಶೀರ್, ಖಜಾಂಜಿ ಬಿ.ಆರ್.ಅಬ್ದುಲ್ ಖಾದರ್, ವಿಖಾಯ ಯೂನಿಟ್ ಚೇರ್ಮನ್ ನಾಸಿರ್ ಮರೋಡಿ, ಮೋನುಕುಂಞಿ ಅಂಗಡಿ, ಸದಸ್ಯರಾದ ಶರೀಫ್, ರಾಝಿಕ್, ನಾಸಿರ್, ಬಾತೀಶ್ ಮತ್ತಿತರರು ಉಪಸ್ಥಿತರಿದ್ದರು.