ಇಂದು ಮಣಿಕ್ಕರ ಸ.ಪ್ರೌ.ಶಾಲಾ ಮುಖ್ಯಶಿಕ್ಷಕಿ ನಳಿನಿ ನಿವೃತ್ತಿ

0

ಪುತ್ತೂರು: ತಾಲೂಕು ಕೊಳ್ತಿಗೆ ಗ್ರಾಮದ ಮಣಿಕ್ಕರ ಸರಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ನಳಿನಿ ಪುರುಷೋತ್ತಮ ಕಿರ್ಲಾಯ ಅವರು ಜು.31ರಂದು ನಿವೃತ್ತರಾಗಲಿದ್ದಾರೆ.

ಐವರ್ನಾಡು ಗ್ರಾಮದ ಕುಳ್ಳಂಪಾಡಿ ಮನೆ ವೆಂಕಪ್ಪ ಗೌಡ ಮತ್ತು ಚಂದ್ರಮ್ಮ ದಂಪತಿಯ ಪುತ್ರಿಯಾಗಿರುವ ಇವರು ವಿದ್ಯಾಭ್ಯಾಸದ ಬಳಿಕ 1988 ಆಗಸ್ಟ್ ರಿಂದ 1996 ಮಾರ್ಚ್ ವರೆಗೆ ಜ್ಯೋತಿ ಪ್ರೌಢಶಾಲೆ ಪೆರಾಜೆಯಲ್ಲಿ ವಿಜ್ಞಾನ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದರು.

1996ರಿಂದ 2019 ನವೆಂಬರ್ ವರೆಗೆ ಸರಕಾರಿ ಪದವಿ ಪೂರ್ವ ಕಾಲೇಜು ಗಾಂಧಿನಗರ ಕೆ ಪಿಎಸ್ ಇಲ್ಲಿ ವಿಜ್ಞಾನ ಶಿಕ್ಷಕಿ ಹಾಗೂ ಪ್ರಭಾರ ಉಪಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ ಇವರು, 2019ರಲ್ಲಿ ಸರಕಾರಿ ಪ್ರೌಢಶಾಲೆ ಗೋಳ್ತಮಜಲು ಬಂಟ್ವಾಳ ಇಲ್ಲಿಗೆ ವರ್ಗಾವಣೆಗೊಂಡರು. 2020 ರಲ್ಲಿ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ಶಿಕ್ಷಣ ಸಂಯೋಜಕರಾಗಿ ಬಂದ ಇವರು, 2023 ಡಿಸೆಂಬರ್ ವರೆಗೆ ಕಾರ್ಯನಿರ್ವಹಿಸಿ, 2024 ಮೇ ತಿಂಗಳಲ್ಲಿ ಮುಖ್ಯ ಶಿಕ್ಷಕರಾಗಿ ಪದೋನ್ನತಿ ಹೊಂದಿ ಕೊಳ್ತಿಗೆ ಮಣಿಕ್ಕರ ಸರಕಾರಿ ಪ್ರೌಢಶಾಲೆಗೆ ವರ್ಗಾವಣೆಗೊಂಡರು. ಸುದೀರ್ಘ 37 ವರ್ಷಗಳ ಸೇವಾ ಅವಧಿಯಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಹಾಗೂ ಸಂಸ್ಥೆಗಳ ಅಭಿವೃದ್ಧಿಗೆ ನಿರಂತರ ಶ್ರಮಿಸಿದ್ದಾರೆ. ಪಾಠ ಹಾಗೂ ಪತ್ಯೇತರ ಚಟುವಟಿಕೆ, ವೈಜ್ಞಾನಿಕ ಸ್ಪರ್ಧೆಗಳಲ್ಲಿ ಭಾಗವಹಿಸಲು ತಯಾರಿ, ನವೋದಯ, ಎನ್.ಎಂ.ಎಂ.ಎಸ್, ಎನ್ ಟಿಎಸ್.ಇ. ಸ್ಪರ್ಧಾತ್ಮಕ ಪರೀಕ್ಷಾ ತಯಾರಿ ತರಬೇತಿಗಳಲ್ಲೂ ತೊಡಗಿಸಿಕೊಂಡು ಕ್ರಿಯಾಶೀಲರಾಗಿದ್ದಾರೆ.

ನಳಿನಿಯವರು ಸುಳ್ಯ ನಾವೂರು – ಕಾಯರ್ತೋಡಿ ನಿವಾಸಿ, ಪೆರಾಜೆ ಜ್ಯೋತಿ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಪುರುಷೋತ್ತಮ ಕಿರ್ಲಾಯರ ಪತ್ನಿ. ಮಗ ಯಶಸ್ ಕಿರ್ಲಾಯ ಎಂ.ಬಿ.ಎ. ಪದವೀಧರ. ಮಗಳು ಶಕಿಲಾ ಸಾಪ್ಟ್ ವೇರ್ ಉದ್ಯೋಗಿಯಾಗಿದ್ದು ಪತಿ ಸಚಿನ್ ರೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

LEAVE A REPLY

Please enter your comment!
Please enter your name here