ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿ ಪೂರ್ವ ವಿದ್ಯಾಲಯ ನೆಲ್ಲಿಕಟ್ಟೆಯ ವಿದ್ಯಾರ್ಥಿಗಳು ಕಡಬದ ಸರಸ್ವತಿ ವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ವಿದ್ಯಾಭಾರತಿ ಜಿಲ್ಲಾಮಟ್ಟದ ಚದುರಂಗ ಸ್ಪರ್ಧೆಯ ತರುಣರ ತಂಡ ವಿಭಾಗದಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳಾದ ದ್ವಿತೀಯ ಪಿಯುಸಿಯ ಅಶ್ವಿನ್ ಪಿ.ಎಸ್., ರಂಜನ್ ವಿ, ವಿಶ್ರುತ್ ರೈ, ದಿಗಂತ್ ಶೆಟ್ಟಿ ಹಾಗೂ ಪ್ರಥಮ ಪಿಯುಸಿಯ ಜನಕ್ ಆರ್.ಕೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.