ಹಿರೆಬಂಡಾಡಿ: ಉಪ್ಪಿನಂಗಡಿ-ಹಿರೆಬಂಡಾಡಿ ರಸ್ತೆಯ ನೆಹರುತೋಟ ಎಂಬಲ್ಲಿ ವಾರದ ಹಿಂದೆ ಬೃಹತ್ ಮರವೊಂದು ಬಿದ್ದು ಅದರ ಗೆಲ್ಲುಗಳು ರಸ್ತೆಗೆ ಬಾಗಿಕೊಂಡಿದ್ದು ಇದನ್ನು ತೆರವು ಮಾಡದೆ ಇದ್ದುದ್ದರಿಂದ ಸುಗಮ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿತ್ತು. ಇದನ್ನು ಮನಗಂಡ ಸ್ಥಳೀಯ ನಿವಾಸಿಗಳಾದ ನವೀನ್ ನೆಹರುತೋಟ, ಪ್ರವೀಣ್ ನೆಹರುತೋಟ, ಸೀತಾರಾಮ, ಪುರುಷೋತ್ತಮ, ಅಣ್ಣು ಗೌಡ ನೆಹರುತೋಟ ಮತ್ತಿತರರು ಮರ ತೆರವುಗೊಳಿಸಿ ಸಹಕರಿಸಿದರು.
