ಸಂತ ಜಾರ್ಜ್ ವಿದ್ಯಾ ಸಂಸ್ಥೆಯಲ್ಲಿ ವಿಶ್ವ ಸ್ಕೌಟ್ ಸ್ಕಾರ್ಫ್ ದಿನಾಚರಣೆ

0

ನೆಲ್ಯಾಡಿ. ಇಲ್ಲಿನ ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಸ್ಕೌಟ್ ಸ್ಕಾರ್ಫ್ ದಿನವನ್ನು ಆಚರಿಸಲಾಯಿತು.

ಕಾರ್ಯಕ್ರಮವನ್ನು ಭಾರತ ಸ್ಕೌಟ್ ಅಂಡ್ ಗೈಡ್ಸ್ ಸಿನ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಯದರ್ಶಿ ಪ್ರತಿಮ್ ಕುಮಾರ್ ಕೆ.ಎಸ್ ಉದ್ಘಾಟಿಸಿ, ಪ್ರತಿಯೊಬ್ಬ ವಿದ್ಯಾರ್ಥಿಯು ಸ್ಕೌಟ್ ಗೈಡ್ಸ್ ರೇಂಜರ್ ರೋವರ್ ನಲ್ಲಿ ಸೇರಿ ಇತರ ವಿದ್ಯಾರ್ಥಿಗಳಿಗಿಂತ ಭಿನ್ನವಾಗಿ ಸಮಾಜವನ್ನು ಕಂಡು,ಸಮಾಜದ ಅಗತ್ಯಕ್ಕೆ ಅನುಗುಣವಾಗಿ ಮಾದರಿ ವಿದ್ಯಾರ್ಥಿಯಾಗಿ ಬದುಕಬೇಕು. ಪ್ರತಿಯೊಂದು ಸಾಮಾಜಿಕ ಚಟುವಟಿಕೆಯಲ್ಲಿ ತನ್ನನ್ನು ತಾನು ತೊಡಗಿಸಿ ತಾನೊಬ್ಬ ಸ್ಕೌಟ್ ಗೈಡ್ ರೆಂಜರ್ ರೋವರ್ ವಿದ್ಯಾರ್ಥಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಹಾಗೆ ಬದುಕಬೇಕು ಎಂದರು.

ಉಪ್ಪಿನಂಗಡಿ ಸ್ಥಳೀಯ ಸಂಸ್ಥೆಯ ಕೋಶಾಧಿಕಾರಿ ಜನಾರ್ದನ ಟಿ. ಮಾತನಾಡಿ, ಸ್ಕಾರ್ಫ್ ಡೇ ಮತ್ತು ಸ್ಕೌಟಿನ ಇತಿಹಾಸದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತ ಜಾರ್ಜ್ ಕನ್ನಡ ಮಾಧ್ಯಮದ ಮುಖ್ಯ ಗುರು ತೋಮಸ್ ಎಂಐ ವಹಿಸಿ ದೇಶದ ಭವಿಷ್ಯ ತರಗತಿ ಕೋಣೆಯಲ್ಲಿ ರೂಪುಗೊಳ್ಳುತ್ತದೆ ಆದುದರಿಂದ ಪ್ರತಿಯೊಬ್ಬರು ಸ್ಕೌಟ್ ಗೈ ಡ್ಸ್ ರೋವರ್ ರೇಂಜರ್ ನಲ್ಲಿ ಸೇರಿ ದೇಶ ಕಟ್ಟಲು ತಯಾರಾಗಬೇಕು ಎಂದರು.

ಸಂತ ಜಾರ್ಜ್ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ರೆ. ಫಾ. ಅನೀಶ್ ಪಾರಶೇರಿಲ್, ಸಂಸ್ಥೆಯ ಸಂಚಾಲಕ ರೆ. ಫಾ. ನೋಮಿಸ್ ಕುರಿ ಯಾಕೋಸ ಶುಭ ಹಾರೈಸಿದರು. ಆಂಗ್ಲ ಮಾಧ್ಯಮದ ಮುಖ್ಯ ಗುರು ಹರಿಪ್ರಸಾದ್ ಕೆ. ಕಾಲೇಜಿನ ಪ್ರಾಂಶುಪಾಲ ಎಂ ಕೆ ಏಲಿಯಾಸ್, ಕನ್ನಡ ಮಾಧ್ಯಮದ ಸ್ಕೌಟ್ ಮಾಸ್ಟರ್ ವರ್ಗಿಸ್ ಫ್ರಾನ್ಸಿಸ್, ರೇಂಜರ್ ಲೀಡರ್ ಜೆಸಿಂತಾ ಕೆ. ಜೆ. ಉಪಸ್ಥಿತರಿದ್ದರು. ರೋವರ್ ಲೀಡರ್ ಮಧು ಏ.ಜೆ ಸ್ವಾಗತಿಸಿ, ಗೈಡ್ಸ್ ಶಿಕ್ಷಕಿ ಜೆಸಿಂತಾ ಡಿಸೋಜಾ ವಂದಿಸಿದರು. ಗೈಡ್ಸ್ ಶಿಕ್ಷಕಿ ಪ್ರಫುಲ್ಲ ನಿರೂಪಿಸಿದರು.

LEAVE A REPLY

Please enter your comment!
Please enter your name here