
ವಿಟ್ಲ: ಧಾರ್ಮಿಕ ಶ್ರದ್ಧಾ ಕೇಂದ್ರದ ಕಾಣಿಕೆ ಡಬ್ಬಿಯನ್ನು ಒಡೆದು ಹಣ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗೊಳನ್ನು ವಿಟ್ಲ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ
ಬಂಟ್ವಾಳ ತಾಲೂಕು ವಿಟ್ಲ ಕಸಬಾ ನಿವಾಸಿಗಳಾದ ತ್ವಾಹಿದ್ (19 ವ.), ಉಮ್ಮರ್ ಫಾರೂಕ್ (18 ವ.) ಹಾಗೂ ಮೊಹಮ್ಮದ್ ನಬೀಲ್ (18 ವ.) ಬಂಧಿತ ಆರೋಪಿಗಳು.
ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ದೇಲಂತಬೆಟ್ಟು ನಿವಾಸಿ ಡಿ. ಜಾರಾಯಣ ರಾವ್ ಪ್ರಕರಣದ ದೂರುದಾರರಾಗಿದ್ದಾರೆ. ಸ್ಥಳೀಯ ಧಾರ್ಮಿಕ ಶ್ರದ್ಧಾಕೇಂದ್ರವೊಂದರ ಅಧ್ಯಕ್ಷನಾಗಿರುವ ನಾನು ದೇಲಂತಬೆಟ್ಟುವಿನ ರಸ್ತೆ ಬದಿಯಲ್ಲಿರುವ ನಮ್ಮ ಕ್ಷೇತ್ರದ ಕಾಣಿಕೆಹುಂಡಿಯಲ್ಲಿರುವ ಹಣವನ್ನು ಜು.26ರಂದು ತೆಗೆಯಲು ಬಂದಾಗ ಅದು ಕಳವಾಗಿರುವುದು ಬೆಳಕಿಗೆ ಬಂದಿದೆ. ಅದರಲ್ಲಿ ಹದಿನೈದರಿಂದ ಇಪ್ಪತ್ತು ಸಾವಿರ ರೂಪಾಯಿ ಹಣ ಇರಬಹುದು ಎಂದು ಅವರು ವಿಟ್ಲಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.