ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ವಾಣಿಜ್ಯ ಸಂಘ ಹಾಗೂ ಹಿಂದೂ ಆರ್ಥಿಕ ವೇದಿಕೆ ಮಹಿಳಾ ವಿಭಾಗ ಇವುಗಳ ಸಹಯೋಗದೊಂದಿಗೆ ಉದ್ಯಮ ಅಭಿವೃದ್ಧಿ ಕಾರ್ಯಾಗಾರ ನಡೆಯಿತು.
ಕಾರ್ಯಾಗಾರದ ಉದ್ಘಾಟನೆಯನ್ನು ಹಿಂದೂ ಆರ್ಥಿಕ ವೇದಿಕೆ ಮಹಿಳಾ ವಿಭಾಗ ಇದರ ಅಧ್ಯಕ್ಷರಾದ ಕೃಷ್ಣವೇಣಿ ಮುಳಿಯ ಇವರು ನಡೆಸಿಕೊಟ್ಟರು. ಕಾರ್ಯಾಗಾರವನ್ನು ಪ್ರಾಜೆಕ್ಟ್ ಡಿಸೈನ್ ಲ್ಯಾಬ್ ಇದರ ನಿರ್ದೇಶಕ ರಾಮ್ ಪ್ರಕಾಶ್ ಟಿ.ಎಸ್ ನಡೆಸಿಕೊಟ್ಟು, ಸ್ವಂತ ಉದ್ದಿಮೆಯ ಮಹತ್ವ ಹಾಗೂ ಪ್ರಯೋಜನದ ಕುರಿತು ಮಾಹಿತಿಯನ್ನು ನೀಡಿದರು.

ನಿತ್ಯ ಫುಡ್ ಪ್ರಾಡಕ್ಟ್ಸ್ ಇದರ ಮಾಲೀಕರಾದ ರಾಧಾಕೃಷ್ಣ ಆಹಾರ ಉದ್ಯಮಗಳಲ್ಲಿರುವ ಅವಕಾಶಗಳ ಕುರಿತಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಣಿಜ್ಯ ವಿಭಾಗದ ಮುಖ್ಯಸ್ಥ ದೇವಿಪ್ರಸಾದ್ ವಹಿಸಿದ್ದರು. ಕಾರ್ಯಾಗಾರದಲ್ಲಿ ಹಿಂದೂ ಆರ್ಥಿಕ ವೇದಿಕೆ ಮಹಿಳಾ ವಿಭಾಗ ಇದರ ಕಾರ್ಯದರ್ಶಿ ಮಹಾಲಕ್ಷ್ಮಿ .ಕೆ, ಉಪಾಧ್ಯಕ್ಷೆ ಶರಾವತಿ ರವಿನಾರಾಯಣ, ವಿವೇಕಾನಂದ ಪದವಿಪೂರ್ವ ಕಾಲೇಜಿನ ಶೈಕ್ಷಣಿಕ ಸಂಯೋಜಕ ಶ್ರೀವತ್ಸ .ಎನ್ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಕಾರ್ಯಾಗಾರದಲ್ಲಿ ಉಪನ್ಯಾಸಕರು ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ವಾಣಿಜ್ಯ ವಿಭಾಗದ ಉಪನ್ಯಾಸಕಿ ಗ್ರೀಷ್ಮ ಕೆ. ಎಸ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.