ನೆಲ್ಯಾಡಿ: ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರ ಜನ್ಮ ದಿನದ ಅಂಗವಾಗಿ ನೆಲ್ಯಾಡಿ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಮತ್ತು ಪಡುಬೆಟ್ಟು ಮಹಾವಿಷ್ಣು ಗೆಳೆಯರ ಬಳಗದ ವತಿಯಿಂದ ಪಡುಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಡಾ.ಸುಬ್ರಹ್ಮಣ್ಯ ಶಬರಾಯ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಸತೀಶ್ ಕೆ.ಎಸ್., ಕಡಬ ವಲಯ ಸಂಯೋಜಕಿ ಸುಜಾತ ಆರ್.ಶೆಟ್ಟಿ, ನೆಲ್ಯಾಡಿ ಸೇವಾದೀಕ್ಷತೆ ಹರಿಣಾಕ್ಷಿ, ಪಡುಬೆಟ್ಟು ಮಹಾವಿಷ್ಣು ಗೆಳೆಯರ ಬಳಗದ ಮಾಜಿ ಅಧ್ಯಕ್ಷರಾದ ಬಿ.ರಮೇಶ ಶೆಟ್ಟಿ, ಸತೀಶ ಶೆಟ್ಟಿ, ಗಿರೀಶ್ ಶೆಟ್ಟಿ, ಸಂದೇಶ್ ಶೆಟ್ಟಿ, ಸದಸ್ಯರಾದ ಹರಿಚಂದ್ರ ರೈ, ಚಂದ್ರಶೇಖರ ಶೆಟ್ಟಿ, ಸುರೇಶ ಶೆಟ್ಟಿ, ದಿವಾಕರ ರೈ, ಸುಂದರ ರೈ, ನೆಲ್ಯಾಡಿ ಘಟ ಸಮಿತಿ ಅಧ್ಯಕ್ಷ ಗಂಗಾಧರ ಶೆಟ್ಟಿ ಕೊಲ್ಯೊಟ್ಟು ಮತ್ತಿತರರು ಉಪಸ್ಥಿತರಿದ್ದರು.