ಅಧ್ಯಕ್ಷ ವಸಂತ ಕುಮಾರ್, ಕಾರ್ಯದರ್ಶಿ ನರಸಿಂಹ ಭಂಡಾರಿ
ಪುತ್ತೂರು: ಮಾಜಿ ಸೈನಿಕರ ಸಂಘ ಪುತ್ತೂರು ಇದರ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯು ಆ.3ರಂದು ಸಂಘದ ಅಧ್ಯಕ್ಷ ಎನ್.ಕೆ. ಭಟ್‌ರವರ ಅಧ್ಯಕ್ಷತೆಯಲ್ಲಿ ಸಂಘ ಸಭಾಭವನದಲ್ಲಿ ನಡೆಯಿತು.
ಸಭೆಯಲ್ಲಿ ಸಂಘದ ಕಾರ್ಯದರ್ಶಿ ನಾಗಪ್ಪ ಗೌಡ ವಾರ್ಷಿಕ ವರದಿ ಮಂಡಿಸಿದರು. ಖಜಾಂಚಿ ಸುಬ್ರಮಣ್ಯ ಭಟ್ ವಾರ್ಷಿಕ ಲೆಕ್ಕ ಪತ್ರ ಮಂಡಿಸಿದರು. ಬಳಿಕ ಸಂಘದ ಯೋಜನೆ ಮತ್ತು ಇತರ ವಿಷಯಗಳ ಬಗ್ಗೆ ಸಂವಾದ, ಚರ್ಚಿಸಲಾಯಿತು.

ನೂತನ ಪದಾಧಿಕಾರಿಗಳ ಆಯ್ಕೆ:
ಸಭೆಯಲ್ಲಿ 2025-26ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ನಡೆಸಲಾಯಿತು. ಅಧ್ಯಕ್ಷರಾಗಿ ವಸಂತ ಕುಮಾರ್ ಬಿ. ಪ್ರಧಾನ ಕಾರ್ಯದರ್ಶಿಉಆಗಿ ನರಸಿಂಹ ಭಂಡಾರಿ ಹಾಗೂ ಗೌರವಾಧ್ಯಕ್ಷರಾಗಿ ಎಂ.ಕೆ ನಾರಾಯಣ ಭಟ್, ಉಪಾಧ್ಯಕ್ಷರಾಗಿ ಸುಂದರ ಗೌಡ ನಡುಬೈಲು, ಜೊತೆ ಕಾರ್ಯದರ್ಶಿಯಾಗಿ ಪುರಂದರ, ಕೋಶಾಧಿಕಾರಿಯಾಗಿ ಸುಂದರ ಕೆ., ಕಾರ್ಯಕಾರಿ ಸಮಿತಿ ಸದಸ್ಯರಾಗು ಜಗನ್ನಾಥ ರೈ ಎಂ., ಉಮೇಶ್, ರಮೇಶ್ ರೈ ಬೋಲೋಡಿ, ಜೋ.ಡಿ ಸೋಜ, ದಯಾನಂದ ಕೆ.ಎಸ್, ಮಾಧವ ಬಿ.ಕೆ., ಭಾಸ್ಕರ ನಾಯ್ಕ್, ವಸಂತ ಕುಮಾರ್ ಎಚ್.ರವರನ್ನು ಆಯ್ಕೆಮಾಡಲಾಯಿತು. ಜಗನ್ನಾಥ ರೈ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ನಿರ್ಗಮಿತ ಕಾರ್ಯದರ್ಶಿ ನಾಗಪ್ಪ ವಂದಿಸಿದರು. ಜಗನ್ನಾಥ ರೈ ಕಾರ್ಯಕ್ರಮ ನಿರೂಪಿಸಿದರು.