ಪುತ್ತೂರು: ಪುತ್ತೂರು ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಗೆ ಬರುವ ಎಲ್ಲಾ ಪಕ್ಷದ ಘಟಕಗಳನ್ನು ಬಲಿಷ್ಠಗೊಳಿಸುವ ಸಲುವಾಗಿ ಬ್ಲಾಕ್ ಪದಾಧಿಕಾರಿಗಳನ್ನು ಘಟಕಗಳಿಗೆ ಉಸ್ತುವಾರಿಯನ್ನಾಗಿ ನೇಮಿಸಲು ಬ್ಲಾಕ್ ಕಾಂಗ್ರೆಸ್ ತಿರ್ಮಾನಿಸಿದ್ದು ಅದರಂತೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿಗಳ ಘಟಕದ ಉಸ್ತುವಾರಿಯಾಗಿ ಬ್ಲಾಕ್ ಕಾರ್ಯದರ್ಶಿಯಾಗಿರುವ ಬಾಬು ಕಲ್ಲುಗುಡ್ಡೆ ಅವರನ್ನು ನೇಮಕ ಮಾಡಲಾಗಿದೆ.
ಶಾಸಕ ಅಶೋಕ್ ಕುಮಾರ್ ರೈಯವರ ಸೂಚನೆಯಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವರವರ ಶಿಫಾರಸ್ಸಿನಂತೆ ಈ ನೇಮಕ ನಡೆದಿದೆ. ಪ್ರಸ್ತುತ ಮುಂಡೂರು ಗ್ರಾಮ ಪಂಚಾಯತ್ ಸದಸ್ಯರಾಗಿರುವ ಬಾಬು ಕಲ್ಲಗುಡ್ಡೆಯವರು ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.