ಪುತ್ತೂರು: ಬಪ್ಪಳಿಗೆ ನಿವಾಸಿ ಪಶುವೈದ್ಯೆ ಡಾ. ಕೀರ್ತನಾ ಜೋಶಿ(27ವ)ರವರು ಮಂಗಳೂರಿನಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಪುತ್ತೂರು ಬಪ್ಪಳಿಗೆ ನಿವಾಸಿ ಚಾರ್ಟಡ ಅಕೌಂಟೆಂಟ್ ಆಗಿರುವ ಗಣೇಶ್ ಜೋಶಿರವರ ಪುತ್ರಿ ಕೀರ್ತನಾ ಜೋಶಿ ಆ.5ರಂದು ರಾತ್ರಿ ಮಂಗಳೂರಿನ ಸ್ವಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗಿದೆ.
ಕೀರ್ತನಾ ಜೋಶಿ ಅವರ ಮೃತದೇಹದನ್ನು ಪುತ್ತೂರಿನ ಮನೆಗೆ ತಂದು, ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಪಶುವೈದ್ಯಕೀಯದಲ್ಲಿ ಎಂ.ಡಿ.ಶಿಕ್ಷಣ ಪೂರೈಸಿರುವ ಡಾ.ಕೀರ್ತನಾ ಜೋಶಿ ಅವರು ಪುತ್ತೂರು, ಕೊಯಿಲ ಹಾಗೂ ಮಂಗಳೂರಿನಲ್ಲಿ ಖಾಸಗಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಮೃತರು ತಂದೆ ಗಣೇಶ್ ಜೋಶಿ, ತಾಯಿ ವೀಣಾ ಜೋಶಿ, ಸಹೋದರಿ ಡಾ. ಮೇಘನಾ ಜೋಶಿರವರನ್ನು ಅಗಲಿದ್ದಾರೆ.