ಸವಣೂರು: ಒಡಿಯೂರು ಶ್ರೀ ಶ್ರೀ ಗುರುದೇವಾನಂದ ಸ್ವಾಮಿಜಿಯ 64ನೇ ಜನ್ಮ ದಿನೋತ್ಸವದ ಪ್ರಯುಕ್ತ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಒಡಿಯೂರು ಸ್ವ ಸಹಾಯ ಸಂಘಗಳ ಘಟ ಸಮಿತಿ ಪಾಲ್ತಾಡಿ ಇದರ ವತಿಯಿಂದ ಆ.3ರಂದು ಅಂಕತಡ್ಕ ಪೇಟೆಯಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.
ಸ್ವಚ್ಚತಾ ಕಾರ್ಯಕ್ರಮದಲ್ಲಿ ಒಡಿಯೂರು ಗ್ರಾಮ ವಿಕಾಸ ಯೋಜನೆಯ ಮೇಲ್ವಿಚಾರಕಿ ಗೀತಾ ನೆಟ್ಟಾರು, ವಲಯ ಸಂಯೋಜಕಿ ಶೀಬಾ ರೈ , ಒಡಿಯೂರು ಸ್ವ ಸಹಾಯ ಸಂಘಗಳ ಪಾಲ್ತಾಡಿ ಘಟ ಸಮಿತಿಯ ಅಧ್ಯಕ್ಷ ಪ್ರವೀಣ್ ಚೆನ್ನಾವರ, ಕಾರ್ಯದರ್ಶಿ ಕಿಶೋರ್ ಕುಮಾರ್ ಸಮೃದ್ದಿ, ಮಾಜಿ ಅಧ್ಯಕ್ಷ ರಾಮಣ್ಣ ರೈ ಬಾಕಿಜಾಲು,ಮಾಜಿ ಕಾರ್ಯದರ್ಶಿ ಹರೀಶ್ ಮಡಿವಾಳ,ರಿಕ್ಷಾ ಚಾಲಕ ಮಾಲಕರು, ಸಂಘದ ಸದಸ್ಯರು,ಚೆನ್ನಾವರ ಅಭ್ಯುದಯ ಯುವಕ ಮಂಡಲದ ಸದಸ್ಯರು ಪಾಲ್ಗೊಂಡಿದ್ದರು.