ಪ್ರಗತಿ ಸ್ಟಡಿ ಸೆಂಟರ್ ವತಿಯಿಂದ ‘ಕೆಸರ್ಡ್ ಒಸರ್ ‘ : “ಕೆಸರಲ್ಲಿ ಮಿಂದೆದ್ದ ಪ್ರಗತಿ ಪಡೆಗಳು”

0

ಪುತ್ತೂರು: ಪುತ್ತೂರಿನ ಹೃದಯ ಭಾಗದ ಶ್ರೀ ಧರ್ಮಸ್ಥಳ ಕಟ್ಟಡದ ಎರಡನೇ ಮಹಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ ಪ್ರಾಯೋಜಕತ್ವದಲ್ಲಿ “ಕೆಸರ್ಡ್ ಒಸರ್” ಕಾರ್ಯಕ್ರಮ ಭಟ್ಟಿ ಬಲ್ನಾಡು ವಿನಾಯಕ ದೇವಸ್ಥಾನದ ಮುಂಭಾಗ ಆ.4ರಂದು ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ನಿವೃತ್ತ ಶಿಕ್ಷಕರು ಮಧು ಪ್ರಪಂಚ ಪತ್ರಿಕಾ ಪ್ರಧಾನ ಸಂಪಾದಕರು ಆಗಿರುವ ನಾರಾಯಣ ರೈ ಕುಕ್ಕುವಳ್ಳಿ ಇವರು ನೆರವೇರಿಸಿ ಪ್ರಗತಿ ಸ್ಟಡಿ ಸೆಂಟರ್ ಪ್ರತಿ ಬಾರಿಯೂ ವಿನೂತನವಾದ ಕಾರ್ಯಕ್ರಮವನ್ನು ಆಯೋಜಿಸುತ್ತದೆ. ಅಂತಹ ಕಾರ್ಯಕ್ರಮದಲ್ಲಿ ಈ ಕಾರ್ಯಕ್ರಮವು ಒಂದಾಗಿದೆ. ನಮ್ಮ ತುಳುನಾಡಿನಲ್ಲಿ ಮಳೆಗಾಲದಲ್ಲಿ ಮಳೆಯ ನೀರನ್ನು ಅವಲಂಬಿಸಿದರೆ ಉಳಿದ ದಿನ ಒಸರಿನ ನೀರು. ಹಾಗಾಗಿ ಈ “ಕೆಸರ್ಡ್ ಒಸರ್” ಕಾರ್ಯಕ್ರಮದ “ಒಸರು” ವರ್ಷಪೂರ್ತಿ ಇರಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಆಟಿಯ ತಿಂಗಳು ತುಳುನಾಡಿನ ಜನರಿಗೆ ಬಹಳ ವಿಶೇಷ. ಈ ಸಮಯದಲ್ಲಿ ಜನ ವಿವಿಧ ತಿನಿಸುಗಳನ್ನು ಮಾಡುವ ಹಾಗೂ ಹಲವಾರು ಸಂಪ್ರದಾಯಿಕ ಕ್ರೀಡೆಗಳಲ್ಲಿ ಭಾಗವಹಿಸುವುದು ಹಿಂದಿನಿಂದ ಬಂದ ವಾಡಿಕೆ. ಇಂತಹ ಕಾರ್ಯಕ್ರಮಗಳ ಆಯೋಜನೆಯು ವಿದ್ಯಾರ್ಥಿಗಳಿಗೆ ನಮ್ಮ ತುಳುನಾಡಿನ ಸಂಸ್ಕೃತಿಯನ್ನು ಪರಿಚಯಿಸುತ್ತದೆ. ಅಂತಹ ಕೆಲಸವನ್ನು ಪ್ರಗತಿ ಸ್ಟಡಿ ಸೆಂಟರ್ ಮಾಡಿದೆ ಎಂದು ತಿಳಿಸಿದರು.

ಸಂಸ್ಥೆಯ ಸಂಚಾಲಕರಾದ ಗೋಕುಲ್‌ನಾಥ್ ಪಿ.ವಿ. ಇವರು ಮಾತನಾಡುತ್ತಾ ಈ ಕಾರ್ಯಕ್ರಮ ನಡೆಸಲು ವಿದ್ಯಾರ್ಥಿಗಳೇ ಪ್ರೇರಣೆ. ನಮ್ಮ ಸಂಸ್ಥೆಯು ಪ್ರಥಮ ಬಾರಿಗೆ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಇದರ ಎಲ್ಲಾ ಗೆಲುವು ವಿದ್ಯಾರ್ಥಿಗಳಿಗೆ ಸಲ್ಲಬೇಕು ಎಂದು ತಿಳಿಸಿದರು. ಕೆಸರ್ಡ್ ಒಸರ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಪುರುಷರಿಗಾಗಿ ವಾಲಿಬಾಲ್, ಕಬ್ಬಡ್ಡಿ, ಹಗ್ಗಜಗ್ಗಾಟ ಪಂದ್ಯಾಟವನ್ನು ಹಾಗೂ ವಿದ್ಯಾರ್ಥಿನಿಯರಿಗಾಗಿ ಥ್ರೋಬಾಲ್, ಕಬ್ಬಡ್ಡಿ, ಹಗ್ಗಜಗ್ಗಾಟ ಪಂದ್ಯಾಟವನ್ನು ಆಯೋಜಿಸಲಾಯಿತು.

ವಿದ್ಯಾರ್ಥಿಗಳಲ್ಲಿ ಜಯ, ವಿಜಯ, ಕೋಟಿ, ಚೆನ್ನಯ್ಯ ಹಾಗೂ ಭೀಮ ಎಂಬ 5 ತಂಡಗಳು ಭಾಗವಹಿಸಿದ್ದು, ಪ್ರಥಮ ಸ್ಥಾನವನ್ನು ಚೆನ್ನಯ ತಂಡ ತನ್ನದಾಗಿಸಿಕೊಂಡಿದೆ. ದ್ವಿತೀಯ ಸ್ಥಾನವನ್ನು ಜಯ ತಂಡ ತನ್ನದಾಗಿಸಿಕೊಂಡಿದೆ. ಆಲ್ವಿನ್ ನೊರೋನಾ ವೈಯುಕ್ತಿಕ ಚಾಂಪಿಯನ್ ಶಿಪ್‌ನ್ನು ಪಡೆದುಕೊಂಡಿರುತ್ತಾರೆ. ವಿದ್ಯಾರ್ಥಿನಿಯರ ವಿಭಾಗದಲ್ಲಿ ರಾಣಿ ಚೆನ್ನಮ್ಮ ತಂಡ ಹಾಗೂ ಉಪನ್ಯಾಸಕರ ತಂಡ ಪ್ರಥಮ ಬಹುಮಾನ ಪಡೆದುಕೊಂಡರೆ ದ್ವಿತೀಯ ಬಹುಮಾನವನ್ನು ಉಪನ್ಯಾಸಕರ ತಂಡ ತನ್ನದಾಗಿಸಿಕೊಂಡಿದೆ. ಶ್ವೇತಾ ವೈಯಕ್ತಿಕ ಚಾಂಪಿಯನ್ ಶಿಪ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಬಲ್ನಾಡು ಕಟ್ಟೆ ಫ್ರೆಂಡ್ಸ್ ತಂಡದ ವತಿಯಿಂದ ಆಯೋಜಿಸಿರುವ ಮಡಕೆ ಒಡೆಯುವ ಸ್ಪರ್ಧೆಯಲ್ಲಿ 10ನೇ ತರಗತಿಯ ರೆಸ್ಟ್‌ನ್ ಪ್ರಥಮ ಬಹುಮಾನವನ್ನು ತಮ್ಮದಾಗಿಸಿರುತ್ತಾರೆ. ಸಂಜೆ ನಡೆದ ಸಮಾರೋಪ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ ಮಾತನಾಡಿ, ಪ್ರಗತಿ ಸ್ಟಡಿ ಸೆಂಟರ್ ವಿದ್ಯಾರ್ಥಿಗಳ ಮುಂದಾಳತ್ವದಲ್ಲಿ ಆಯೋಜಿಸಿರುವ ಕಾರ್ಯಕ್ರಮ ಇದಾಗಿದೆ. ಪ್ರಕೃತಿಗೆ ಬಹಳ ಹತ್ತಿರವಾದ ಭಗವಂತ ಎಂದರೆ ಗಣಪತಿ, ಅಂತಹ ಭಟ್ಟಿ ವಿನಾಯಕ ದೇವಾಲಯದ ಮುಂಭಾಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿರುವುದು. ಇನ್ನು ವಿಶೇಷ ಮನುಷ್ಯ ಜೀವನದ ಆರಂಭ ಮತ್ತು ಅಂತ್ಯ ಮಣ್ಣಿನಲ್ಲಿಯೇ ಹಾಗಾಗಿ ನಾವು ಪ್ರಕೃತಿಯ ಜೊತೆಗೆ ಬದುಕಬೇಕು. ಮಣ್ಣನ್ನು ಪೂಜಿಸಿದರೆ ನಮಗೆ ಯಾವತ್ತೂ ಸೋಲು ಬರುವುದಿಲ್ಲ ಎಂದು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಗೋಪಾಲಕೃಷ್ಣ ಹೇರಳೆ ಮಾತನಾಡಿ ಗ್ರಾಮೀಣ ಹಾಗೂ ಪೇಟೆಯ ಜೀವನದಲ್ಲಿ ಹಲವಾರು ವಿಚಾರಗಳಿವೆ, ಇವತ್ತು ನಮ್ಮ ವಿದ್ಯಾರ್ಥಿಗಳಿಗೆ ಹಳ್ಳಿಯ ಪರಿಚಯದ ಅನಿವಾರ್ಯತೆ ಇದೆ. ಅಂತಹ ಕೆಲಸವನ್ನು ಪ್ರಗತಿ ಸಂಸ್ಥೆ ಮಾಡಿದೆ ಎಂದು ಹೇಳಿದರು.

ಇನ್ನೋರ್ವ ಮುಖ್ಯ ಅತಿಥಿ ಪರಮೇಶ್ವರಿ ಬಿ ಆರ್ ಅಧ್ಯಕ್ಷರು ಗ್ರಾಮ ಪಂಚಾಯತ್ ಬಲ್ನಾಡು ಮಾತನಾಡಿ, ಇವತ್ತಿನ ಕಾಲದಲ್ಲಿ ನಗರಗಳಲ್ಲಿ ಮಣ್ಣಿಗೆ ಕೂಡ ಹಣ ನೀಡಿ ಪಡೆಯುವಂತಾಗಿದೆ. ಅಂತಹ ಸನ್ನಿವೇಶದಲ್ಲಿ ವಿದ್ಯಾರ್ಥಿಗಳು ಒಂದು ಒತ್ತಡ ರಹಿತವಾಗಿ ಪ್ರಕೃತಿ ಜೊತೆ ಒಂದು ದಿನವನ್ನು ಕಳೆದಿದ್ದಾರೆ ಎಂದು ಹೇಳಿದರು.

ವೇದಿಕೆಯಲ್ಲಿ ಕಿರಣ್ ಕುಮಾರ್ ರೈ ನಿರ್ದೇಶಕರು ಟೌನ್ ಬ್ಯಾಂಕ್ ಪುತ್ತೂರು, ಪ್ರವೀಣ್ ಕುಮಾರ್ ಅಧ್ಯಕ್ಷರು ಕಟ್ಟೆ ಫ್ರೆಂಡ್ಸ್ ಬಲ್ನಾಡು, ಮಾಧವ ಗೌಡ ಕಾಂತಿಲ ಮಾಜಿ ಅಧ್ಯಕ್ಷರು ದಂಡನಾಯಕ ಉಳ್ಳಾಲ್ತಿ ದೇವಸ್ಥಾನ ಬಲ್ನಾಡು ಇವರು ಉಪಸ್ಥಿತರಿದ್ದರು. ಕಾರ್‍ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಹೇಮಲತಾ ಗೋಕುಲ್‌ನಾಥ್, ಉಪನ್ಯಾಸಕ ವೃಂದ, ವಿದ್ಯಾರ್ಥಿಗಳು, ಕಟ್ಟೆ ಫ್ರೆಂಡ್ಸ್ ತಂಡದ ಸದಸ್ಯರು, ಬಲ್ನಾಡು ಗ್ರಾಮದ ಜನರು, ಭಟ್ಟಿ ವಿನಾಯಕ ದೇವಾಲಯದ ಅರ್ಚಕರು ಉಪಸ್ಥಿತರಿದ್ದರು. ಉಪನ್ಯಾಸಕರಾದ ಮಾಧವಿ ಹಾಗೂ ಮಧುಶ್ರೀ ಪ್ರಾರ್ಥಿಸಿದರು. ಸಂಸ್ಥೆಯ ಸಂಚಾಲಕರು ಗೋಕುಲ್‌ನಾಥ್ ಪಿ.ವಿ. ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಪ್ರಮೀಳಾ ಎನ್. ಡಿ. ವಂದಿಸಿದರು, ವಿಂಧ್ಯಾ ಎಸ್. ರೈ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here