ಸಂಜಯನಗರ ಶಾಲಾ ಎಸ್. ಡಿ. ಎಂ. ಸಿ ರಚನೆ

0

ಅಧ್ಯಕ್ಷರಾಗಿ ರಾಜೇಶ್ ಆಚಾರ್ಯ ಬೀರಮಲೆ, ಉಪಾಧ್ಯಕ್ಷರಾಗಿ ಪುಷ್ಪಕುಮಾರಿ ಸಂಜಯನಗರ ಆಯ್ಕೆ
ಕ್ರಿಯಾತ್ಮಕ ಎಸ್. ಡಿ. ಎಂ. ಸಿ ಯೇ ಶಾಲೆಯ ಅಭಿವೃದ್ಧಿಯ ಬುನಾದಿ- ಯೂಸುಫ್ ಡ್ರೀಮ್ಸ್

ಪುತ್ತೂರು: ಸಂಜಯನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಎಸ್ ಡಿ ಎಂ ಸಿ ರಚನೆಯು ಪುತ್ತೂರು ನಗರಸಭಾ ಸದಸ್ಯ ಯೂಸುಫ್ ಡ್ರೀಮ್ಸ್ ಉಪಸ್ಥಿತಿಯಲ್ಲಿ ನಡೆಯಿತು. ನೂತನ ಎಸ್. ಡಿ. ಎಂ. ಸಿ ಅಧ್ಯಕ್ಷರಾಗಿ ಬೀರಮಲೆ ರಾಜೇಶ್ ಆಚಾರ್ಯ ಹಾಗೂ ಉಪಾಧ್ಯಕ್ಷರಾಗಿ ಪುಷ್ಪ ಉಮೇಶ್ ಸಂಜಯನಗರ ಆಯ್ಕೆಯಾದರು . ಉಳಿದಂತೆ ಸದಸ್ಯರಾಗಿ ನಿಕಟ ಪೂರ್ವ ಅಧ್ಯಕ್ಷೆ ಚೈತ್ರ ಮನೋಜ್ ಕುಮಾರ್, ಗೀತಾ ದಾಮೋದರ್ ಪಳಿಕೆ, ಮಮತಾ ಹರೀಶ್ ಪಳಿಕೆ, ನಾಗೇಶ್ ಪಳಿಕೆ, ಸುಮತಿ ಪಳಿಕೆ,  ರೋಹಿಣಿ ಪಳಿಕೆ,ಹೊಳೆಪ್ಪ ಮರಿಲ್, ಸವಿತಾ ಪಳಿಕೆ, ಆಯಿಷಾ ಸಂಜಯ ನಗರ, ರೆಹಮತ್ ಸಂಜಯನಗರ,ಅನಿಷಾ ಸಂಜಯನಗರ,ನೆಸೀಮಾ ಸಂಜಯನಗರ,ಜೈನುದ್ದೀನ್ ಸಂಜಯನಗರ, ಸಾವಿತ್ರಿ ಮರಿಲ್, ದಿವ್ಯಕುಮಾರಿ ಬಲ್ನಾಡು,ವಸಂತಿ ಮರಿಲ್ ಆಯ್ಕೆಯಾದರು.

 ಇಲಾಕ ನಿಯಮದಂತೆ ಪದನಿಮಿತ್ತ ಸದಸ್ಯರಾಗಿ ಶಾಲಾ ಮುಖ್ಯ ಗುರು ರಮೇಶ್ ಉಳಯ, ಸಂಜಯ ನಗರ ಅಂಗನವಾಡಿ ಕಾರ್ಯಕರ್ತೆ ಪ್ರಮೀಳಾ ರಾವ್, ಆರೋಗ್ಯ ಕಾರ್ಯಕರ್ತೆ ವೀಣಾ ಕಾಣಿಯೂರು ಹಾಗೂ ನಾಮನಿರ್ದೇಶಿತ ಸದಸ್ಯರಾಗಿ ನಗರಸಭಾ ಸದಸ್ಯರಾದ ಯೂಸುಫ್ ಡ್ರೀಮ್ಸ್, ಶಾಲಾ ಹಿರಿಯ ಶಿಕ್ಷಕಿ ಸ್ಮಿತಾ ಶ್ರೀ ಬಿ, ಹಾಗೂ ಶಾಲಾ ಹಿರಿಯ ತರಗತಿಯ ವಿದ್ಯಾರ್ಥಿನಿ ಮನ್ವಿತ ಕೆ ಇವರುಗಳನ್ನು ಆಯ್ಕೆ ಮಾಡಲಾಯಿತು.

 ನೂತನ ಎಸ್ ಡಿ ಎಂ ಸಿ ರಚನಾ ಕಾರ್ಯದಲ್ಲಿ ಉಪಸ್ಥಿತರಿದ್ದ ಪುತ್ತೂರು ನಗರಸಭಾ ಸದಸ್ಯರಾದ ಯೂಸುಫ್ ಡ್ರೀಮ್ಸ್ ಅವರು ಮಾತನಾಡಿ  ಕ್ರಿಯಾತ್ಮಕವಾದ ಎಸ್ ಡಿ ಎಂ ಸಿ ಯೇ ಶಾಲೆಯ ಅಭಿವೃದ್ಧಿಯ ಬುನಾದಿ ಎಂದರು. ಶಾಲೆಯ  ಪೋಷಕರು ನಮ್ಮ ಶಾಲೆ ಎಂಬ ಪ್ರೀತಿಯಿಂದ ದುಡಿದಾಗ ಮಾತ್ರ ಮಾದರಿ ಶಾಲೆ ರೂಪುಗೊಳ್ಳಲು ಸಾಧ್ಯ ಎಂದ ಅವರು ನೂತನ ಎಸ್ ಡಿ ಎಂ ಸಿ ಗೆ ಶುಭ ಕೋರಿದರು

ಶಾಲಾ ಮುಖ್ಯ ಗುರುಗಳಾದ  ರಮೇಶ ಉಳಯ ರಚನೆ ಕಾರ್ಯಕ್ರಮ ನಡೆಸಿದರು.  ಶಿಕ್ಷಕಿ ಸ್ಮಿತಾ ಶ್ರೀ ಬಿ ಅತಿಥಿ ಶಿಕ್ಷಕಿ ಸೌಮ್ಯ ಇವರು ಸಹಕರಿಸಿದರು.

LEAVE A REPLY

Please enter your comment!
Please enter your name here