ವಿವೇಕಾನಂದ ಕನ್ನಡ ಶಾಲೆಗೆ ಶೈಕ್ಷಣಿಕ ಪರಿವೀಕ್ಷಣಾ ತಂಡದ ಭೇಟಿ

0

ಪುತ್ತೂರು: ಪುತ್ತೂರಿನ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ವಿಶಿಷ್ಟ ಯೋಜನೆಗಳೊಂದಿಗೆ ರಾಜ್ಯದಲ್ಲೇ ಮನೆಮಾತಾಗಿರುವ ವಿವೇಕಾನಂದ ವಿದ್ಯಾವರ್ಧಕ ಸಂಘದ ಛಾಯೆಯಲ್ಲಿ ಬೆಳೆಯುತ್ತಿರುವ 80 ವಿದ್ಯಾಸಂಸ್ಥೆಗಳ ಶೈಕ್ಷಣಿಕ ಗುಣಮಟ್ಟವನ್ನು ಉನ್ನತೀಕರಿಸುವ ದಿಶೆಯಿಂದ ಆರಂಭವಾದ ಸಂಘದ ಶೈಕ್ಷಣಿಕ ಪರಿವೀಕ್ಷಣಾ ಘಟಕವು 2025-26ನೇ ಸಾಲಿನಲ್ಲಿ ವಿವೇಕಾನಂದ ಕನ್ನಡ ಶಾಲೆಗೆ ಭೇಟಿ ನೀಡಿತು.

ತಂಡದಲ್ಲಿ ನಿವೃತ್ತ ಮುಖ್ಯಗುರು ಸುಬ್ರಹ್ಮಣ್ಯ ಭಟ್ , ಶ್ರೀನಿವಾಸ್, ಜಯರಾಮ ಶೆಟ್ಟಿ, ಜಯಶ್ರೀ, ವಿದ್ಯಾರತ್ನ ಹಾಗೂ ಪರಿವೀಕ್ಷಣಾ ಘಟಕ ಸಂಯೋಜಕರಾದ ರಘುರಾಜ ಉಬರಡ್ಕ ಉಪಸ್ಥಿತರಿದ್ದರು. ಶಾಲಾ ಪ್ರಾರ್ಥನೆ, ಪಠ್ಯ ಬೋಧನೆ, ಭೌತಿಕ ವ್ಯವಸ್ಥೆಗಳನ್ನು ವೀಕ್ಷಿಸಿ ಅನಂತರ ಶಿಕ್ಷಕರೊಂದಿಗೆ ಹಾಗೂ ಶಾಲಾ ಆಡಳಿತ ಮಂಡಳಿಯವರೊಂದಿಗೆ ವಿಚಾರ ವಿನಿಮಯ ನಡೆಸಿದರು. ಶಾಲಾ ಅಧ್ಯಕ್ಷರಾದ ರಮೇಶ್ಚಂದ್ರ ಎಂ, ಸಂಚಾಲಕ ವಸಂತ ಸುವರ್ಣ, ಕೋಶಾಧಿಕಾರಿಗಳಾದ ಅಶೋಕ ಕುಂಬ್ಳೆ, ಸದಸ್ಯರಾದ ರಘುನಾಥ ಬಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here