ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್‌ನಲ್ಲಿ ಡೈಮಂಡ್ ಫೆಸ್ಟ್‌ಗೆ ಚಾಲನೆ

0

ಮುಳಿಯ ಸಂಸ್ಥೆಯ ವ್ಯವಹಾರದಲ್ಲಿ ಪಾರದರ್ಶಕತೆ ಇರುತ್ತದೆ-ಪಂಜಿಗುಡ್ಡೆ ಈಶ್ವರ ಭಟ್
ನಂಬಿಕೆ, ವಿನ್ಯಾಸಗಳಿಂದ ಮುಳಿಯದ ವೈಶಿಷ್ಟ್ಯತೆ ಅಡಗಿದೆ-ಭಾರತಿ ಎಸ್. ರೈ

ಪುತ್ತೂರು: ಚಿನ್ನ, ವಜ್ರಾಭರಣಗಳಲ್ಲಿ ಸದಾ ಹೊಸತನ ಪರಿಚಯಿಸುವ ಮೂಲಕ ಗ್ರಾಹಕರ ಪ್ರೀತಿಗೆ ಪಾತ್ರವಾಗಿರುವ ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್‌ನಲ್ಲಿ ಆ.7ರಂದು ಡೈಮಂಡ್ ಫೆಸ್ಟ್‌ಗೆ ಚಾಲನೆ ನೀಡಲಾಯಿತು.


ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಚಿನ್ನ, ವಜ್ರ ಆಭರಣಗಳ ವ್ಯವಹಾರದಲ್ಲಿ ವಿಶ್ವಾಸ, ನಂಬಿಕೆ ಬೇಕು. ಇಂತಹ ನಂಬಿಕೆ ಮುಳಿಯ ಗೋಲ್ಡ್ ಡೈಮಂಡ್ಸ್ ಸಂಸ್ಥೆಯಲ್ಲಿದೆ. ನಾಡಿನಾದ್ಯಂತ ಗ್ರಾಹಕರ ಪ್ರೀತಿ ವಿಶ್ವಾಸಕ್ಕೆ ಮುಳಿಯ ಸಂಸ್ಥೆ ಪಾತ್ರವಾಗಿದೆ ಎಂದರು. ಮುಳಿಯದವರು ಆಭರಣ ವ್ಯವಹಾರ ಅಲ್ಲದೆ ಮನೆ ನಿರ್ಮಾಣದ ಲೇಔಟ್ ಕೂಡ ಕೊಡುತ್ತಿದ್ದಾರೆ. ಅವರ ವ್ಯವಹಾರ ಪಾರದರ್ಶಕತೆಯಲ್ಲಿ ಇರುತ್ತದೆ. ಮುಳಿಯ ಕುಟುಂಬದ ಹಿರಿಯರು ದಾನಧರ್ಮದಲ್ಲಿ ಮುಂಚೂಣಿಯಲ್ಲಿದ್ದಾರೆ. ಪುತ್ತೂರು ಕಂಬಳಕ್ಕೂ ತುಂಬಾ ಸಹಕಾರ ನೀಡುತ್ತಿದ್ದಾರೆ. ಬಡವರ ಕುಟುಂಬದ ಕಣ್ಣೀರೊರೆಸುವ ಕಾರ್ಯ ಮಾಡುತ್ತಿದ್ದಾರೆ. ಎಂದ ಅವರು ಮುಳಿಯದವರ ಪ್ರೀತಿ, ವಿಶ್ವಾಸದಿಂದ ನಾನು ಇಲ್ಲಿಗೆ ಆಗಮಿಸಿದ್ದೇನೆ ಎಂದು ಹೇಳಿ ಶುಭಹಾರೈಸಿದರು.

ಮುಖ್ಯ ಅತಿಥಿ ಸಂತ ಫಿಲೋಮಿನಾ ಪದವಿ(ಸ್ವಾಯತ್ತ) ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥೆಯಾದ ಭಾರತಿ ಎಸ್. ರೈ ಮಾತನಾಡಿ, ಆಭರಣಗಳನ್ನು ಖರೀದಿಸುವುದು, ಧರಿಸುವುದು ನಮ್ಮ ಸಂಸ್ಕೃತಿಯಲ್ಲಿ ಸೇರಿ ಹೋಗಿದೆ. ವಜ್ರ ಅಂದರೆ ಕೇವಲ ಕಲ್ಲಲ್ಲ. ಶುದ್ಧತೆ, ಶಕ್ತಿ ವರ್ಧತೆ ಹಾಗೂ ಶಾಶ್ವತ ಪ್ರೇಮವನ್ನು ಸೂಚಿಸುತ್ತದೆ. ಇದು ವೈಭವ, ಮನೋರಂಜನೆ, ಸಾಮರಸ್ಯವನ್ನು ಹೆಚ್ಚಿಸುತ್ತದೆ. ಬಂಗಾರ ಮತ್ತು ವಜ್ರ ಧಾರ್ಮಿಕ ಪರಂಪರೆಯನ್ನು ಸೂಚಿಸುತ್ತದೆ ಎಂದರು. ನಿರಂತರ ನಂಬಿಕೆ, ವೈವಿಧ್ಯಮಯವಾದ ವಿನ್ಯಾಸಗಳಿಂದ ಮುಳಿಯ ಗೋಲ್ಡ್ ಡೈಮಂಡ್ಸ್‌ನ ವೈಶಿಷ್ಟ್ಯತೆ ಅಡಗಿದೆ. ಗುಣಮಟ್ಟದೊಂದಿಗೆ ಜತೆಯಾಗಿ ಖಚಿತತೆ ಮತ್ತು ಪ್ರಾಮಾಣಿಕತೆಯೊಂದಿಗೆ ಬಂದಿದೆ. 2002ರಿಂದ ನಾನು ಮತ್ತು ನನ್ನ ಕುಟುಂಬ ಮುಳಿಯದ ಗ್ರಾಹಕರಾಗಿದ್ದೇವೆ. ವರಮಹಾಲಕ್ಷ್ಮಿ ಹಬ್ಬದ ಹೊಸ್ತಿಲಲ್ಲಿ ನಾವು ಇದ್ದೇವೆ. ಹಬ್ಬದ ಸಮಯದಲ್ಲಿ ನಿಮಗಿಷ್ಟವಾದ ವಿನ್ಯಾಸದ ಆಭರಣಗಳನ್ನು ಖರೀದಿಸಿ. ಮುಳಿಯ ಸಿಬ್ಬಂದಿಗಳ ನಗುಮೊಗದ ಸೇವೆ ಪಡೆಯಿರಿ ಎಂದು ಹೇಳಿದ ಅವರು ಮುಳಿಯ ಸಂಸ್ಥೆಯ ಹೆಸರು ನಾಲ್ಮಡಿಯಾಗಿ ಬೆಳಗಲಿ ಎಂದು ಹಾರೈಸಿದರು.

ಪ್ರಥಮ ಗ್ರಾಹಕರಿಗೆ ವಜ್ರಾಭರಣ ಹಸ್ತಾಂತರ:
ಡೈಮಂಡ್ಸ್ ಫೆಸ್ಟ್‌ನ ಪ್ರಥಮ ಗ್ರಾಹಕರಿಗೆ ಆಭರಣ ಹಸ್ತಾಂತರಿಸಲಾಯಿತು. ಪ್ರಥಮ ಗ್ರಾಹಕರಾದ ಸ್ನೇಹ ಸಿಲ್ಕ್ಸ್‌ನ ಮಾಲಕರಾದ ಸತೀಶ್ ದಂಪತಿಯವರಿಗೆ ಅತಿಥಿಗಳು ಆಭರಣ ಹಸ್ತಾಂತರಿಸಿದರು.

ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್‌ನ ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯಶ್ರೀ ಪಂಜಿಗುಡ್ಡೆ, ಶೋರೂಮ್ ಮ್ಯಾನೇಜರ್ ರಾಘವೇಂದ್ರ ಪಾಟೀಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡೈಮಂಡ್ಸ್ ವಜ್ರಾಭರಣಗಳನ್ನು ಅತಿಥಿಗಳು ಪ್ರದರ್ಶಿಸಿದರು. ಭವ್ಯಶ್ರೀ ಪ್ರಾರ್ಥಿಸಿ ಫ್ಲೋರ್ ಮ್ಯಾನೇಜರ್ ಯತೀಶ್ ಸ್ವಾಗತಿಸಿದರು. ಆನಂದ ಕುಲಾಲ್ ವಂದಿಸಿದರು.

ಭಾರತದಲ್ಲಿ ಪ್ರಪ್ರಥಮ ಬಾರಿಗೆ ಮುಳಿಯದಲ್ಲಿ ಡೈಮಂಡ್ ಟೆಸ್ಟಿಂಗ್ ಮೆಷಿನ್ ಪರಿಚಯಿಸಿದ್ದೇವೆ
81 ವರ್ಷದ ಅಭೂತಪೂರ್ವ ಪರಂಪರೆ ಹೊಂದಿರುವ ಮುಳಿಯ ಸಂಸ್ಥೆ ಪುತ್ತೂರಲ್ಲಿ ಗ್ರಾಹಕರಿಗೆ ಸೇವೆ ನೀಡುತ್ತಿದೆ. 2002ರಿಂದ ವಜ್ರಗಳ ಉತ್ಸವ ಕಾರ್ಯಕ್ರಮದ ಮೂಲಕ ಗ್ರಾಹಕರಿಗೆ ವಜ್ರಾಭರಣಗಳ ಅತ್ಯುತ್ತಮ ಆಯ್ಕೆ ನೀಡುತ್ತಿದ್ದೇವೆ. ಡೈಮಂಡ್ ಫೆಸ್ಟ್‌ನ ವಿಶೇಷತೆ ಎಂದರೆ ಸಾಲಿಟೈರ್ ಕಲೆಕ್ಷನ್ಸ್ ಇದೆ. ರೇರ್ ಕಲೆಕ್ಷನ್‌ನ್ನು ಪರಿಚಯಿಸುತ್ತಿದ್ದೇವೆ. ಶೋರೂಮ್ ಉದ್ಘಾಟನೆ ಸಮಯದಲ್ಲಿ ಡೈಮಂಡ್‌ನ ಗುಣಮಟ್ಟ ಪರೀಕ್ಷಿಸುವ ಯಂತ್ರವನ್ನು ಲಾಂಚ್ ಮಾಡಿದ್ದೇವೆ. ಈ ಯಂತ್ರ ಭಾರತದಲ್ಲಿ ಪ್ರಪ್ರಥಮ ಬಾರಿಗೆ ಮುಳಿಯದಲ್ಲಿ ಆರಂಭಿಸಿದ್ದೇವೆ. ಇದರಲ್ಲಿ ನ್ಯಾಚುರಲ್ ಹಾಗೂ ಲ್ಯಾಬ್ರೋ ಡೈಮಂಡ್‌ನ್ನು ಪರೀಕ್ಷಿಸಲು ಸಾಧ್ಯವಾಗುತ್ತದೆ. ಡೈಮಂಡ್‌ನ ಸಂಪೂರ್ಣ ಮಾಹಿತಿಯನ್ನು ನಮ್ಮ ಸಿಬಂದಿಗಳು ನೀಡುತ್ತಿದ್ದಾರೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಿ
ಕೃಷ್ಣನಾರಾಯಣ ಮುಳಿಯ
ಆಡಳಿತ ನಿರ್ದೇಶಕರು, ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್

LEAVE A REPLY

Please enter your comment!
Please enter your name here