ಈಶ್ವರಮಂಗಲ: ಹನುಮಗಿರಿ ಶ್ರೀ ಗಜಾನನ ಆ.ಮಾ ಶಾಲೆಯಲ್ಲಿ ಆ.7ರಂದು ಪುತ್ತೂರು ಗ್ರಾಮಾಂತರ ವಲಯ ಮಟ್ಟದ ಚೆಸ್ ಪಂದ್ಯಾಟ ನಡೆಯಿತು.

ಶಾಲಾ ಸಂಚಾಲಕ ಶಿವರಾಮ್ ಪಿ ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ,ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣ ಕ್ಷೇತ್ರದ ಜೊತೆಗೆ ಕ್ರೀಡಾ ಕ್ಷೇತ್ರದಲ್ಲಿಯೂ ಕೂಡ ಇಡೀ ವಿಶ್ವವನ್ನು ಪ್ರತಿನಿಧಿಸುವಂತಾಗಬೇಕು, ಸೋತಾಗ ಕುಗ್ಗದೆ ಮತ್ತೆ ಗೆಲುವಿನತ್ತ ಸಾಗಬೇಕು ಎನ್ನುವ ಸ್ಪೂರ್ತಿದಾಯಕ ಮಾತುಗಳೊಂದಿಗೆ ಎಲ್ಲಾ ಸ್ಪರ್ಧಾಳುಗಳಿಗೆ ಶುಭ ಹಾರೈಸಿದರು.
ನೋಡಲ್ ಅಧಿಕಾರಿಯಾದ ಸುಧೀರ್ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಶಾಲಾ ಪ್ರಾಂಶುಪಾಲ ಕೆ ಶಾಮಣ್ಣ, ದೈಹಿಕ ಶಿಕ್ಷಣ ಶಿಕ್ಷಕರಾದ ಚಂದ್ರಕಲಾ, ಪ್ರವೀಣ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಸೌಮ್ಯ ಎ ಸ್ವಾಗತಿಸಿ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಲತಾ ಡಿ ಕೆ ವಂದಿಸಿದರು. ವಿದ್ಯಾರ್ಥಿನಿಯರಾದ ಅಪೂರ್ವ ಮತ್ತು ಬಳಗದವರು ಪ್ರಾರ್ಥಿಸಿದರು. ಶಿಕ್ಷಕಿಯರಾದ ಪ್ರಸೀದ ಮತ್ತು ದಿವ್ಯಶ್ರೀ ನಿರೂಪಿಸಿದರು.