ಪುತ್ತೂರು: ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಆ.14ರಂದು ನಡೆಯಲಿರುವ ಶೀಂಟೂರು ಸ್ಮೃತಿ ಕಾರ್ಯಕ್ರಮದಲ್ಲಿ 2025-26ನೇ ಸಾಲಿನ ಶೀಂಟೂರು ಶಿಷ್ಯ ವೇತನಕ್ಕೆ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಯ 10 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ.
ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ತೃತೀಯ ಬಿ.ಕಾಂ, ವಿಭಾಗದ ಧನ್ಯಶ್ರೀಬಿ.ಡಿ , ತೃತೀಯ ಬಿ.ಎ. ವಿಭಾಗದ ದೀಕ್ಷಿತ್ , ತೃತೀಯ ಬಿ.ಸಿ.ಎ. ವಿಭಾಗದ ಪವನ್ ಹೆಚ್.ಸಿ, ದ್ವಿತೀಯ ಪಿ.ಯು.ಸಿ. ವಿಜ್ಞಾನ ವಿಭಾಗದ ಶ್ರೀರಕ್ಷ, ದ್ವಿತೀಯ ಪಿ.ಯು.ಸಿ. ವಾಣಿಜ್ಯ ವಿಭಾಗದ ಪ್ರತೀಕ್ಷ , 10 ನೇ ತರಗತಿಯ ಶಝಾ ಫಾತಿಮ, 8ನೆ ತರಗತಿಯ ಎನ್. ಆರ್. ಇಫಾ, 7ನೆ ತರಗತಿಯ ವಂದನ್ ರೈ ಸಿ ವಿದ್ಯಾರಶ್ಮಿ ವಿದ್ಯಾಲಯ, 5ನೆ ತರಗತಿಯ ದಿವಿತ್, ಯು.ಕೆ.ಜಿ.ಯ ಅಝ ಫಾತಿಮರವರುಗಳು ಶೀಂಟೂರು ಶಿಷ್ಯ ವೇತನಕ್ಕೆ ಆಯ್ಕೆಯಾಗಿದ್ದಾರೆ ಎಂದು ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈ ಮತ್ತು ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿ ತಿಳಿಸಿದ್ದಾರೆ.