ಪುತ್ತೂರು: ಕೆಯ್ಯೂರು ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಕೆಯ್ಯೂರು ಇದರ ಆಶ್ರಯದಲ್ಲಿ ಆ.8ರಂದು ಶ್ರೀ ವರಮಹಾಲಕ್ಷ್ಮೀ ವೃತ ಪೂಜೆಯ ಜರಗಿತು. ಅರ್ತಿಯಡ್ಕ ಕಿಶೋರ್ ಭಟ್ರವರು ಪೂಜಾ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಕೆ ಜಯರಾಮ ರೈ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಇಳಂತಾಜೆ ಸಹಿತ ಸಮಿತಿಯ ಸರ್ವ ಸದಸ್ಯರುಗಳು, ಮಾಜಿ ಮೊಕ್ತೇಸರ ಓಲೆಮುಂಡೋವು ಮೋಹನ್ ರೈ, ಶಶಿಧರ ರಾವ್ ಬೊಳಿಕ್ಕಲ, ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಅಧ್ಯಕ್ಷೆ ಮೀನಾಕ್ಷಿ ವಿ.ರೈ, ಕಾರ್ಯದರ್ಶಿ ನಯನಾ ಶರತ್ ಕುಮಾರ್, ಕೋಶಾಧಿಕಾರಿ ರೇಖಾ ಕೆಂಗುಡೇಲು ಸಹಿತ ಪದಾಧಿಕಾರಿಗಳು, ಕೆಯ್ಯೂರು ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವು ಸಹಿತ ಊರಪರವೂರ ಭಕ್ತಾಧಿಗಳು ಉಪಸ್ಥಿತರಿದ್ದು ಶ್ರೀ ದೇವಿಯ ಪ್ರಸಾದ, ಅನ್ನಪ್ರಸಾದ ಸ್ವೀಕರಿಸಿದರು. ಕೋಡಂಬು ಶಿವರಾಮ ದುಗ್ಗಪ್ಪ ರೈ (ಪುಣೆ )ಹಾಗೂ ಸೌಮ್ಯಾ ಶಿವರಾಮ ರೈ ಅವರ ಪುತ್ರಿ ಸ್ತುತಿ ಶಿವರಾಮ ರೈ ಅವರ ಜನ್ಮದಿನದ ಅಂಗವಾಗಿ ಅನ್ನಸಂತರ್ಪಣೆ ಸೇವೆ ನಡೆಯಿತು.


