ಪುತ್ತೂರು: ಎಸ್.ಎಸ್.ಎಫ್ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಇಸ್ಲಾಮಿಕ್ ಕಲೋತ್ಸವವಾದ ಸಾಹಿತ್ಯೋತ್ಸವ ಇದರ ಈಶ್ವರಮಂಗಲ ಸೆಕ್ಟರ್ ಸಾಹಿತ್ಯೋತ್ಸವ ಆ.10ರಂದು ಮೇನಾಲ ಮಸ್ಜಿದು ಸ್ವಹಾಬಾದಲ್ಲಿ ನಡೆಯಲಿದೆ.
ಸುಮಾರು 100ಕ್ಕೂ ಮಿಕ್ಕಿ ನಡೆಯುವ ಸ್ಪರ್ಧೆಗಳಲ್ಲಿ 5 ವೇದಿಕೆಗಳ ಮೂಲಕ 7 ಯೂನಿಟ್ ಗಳಿಂದ 200ರಷ್ಟು ಸ್ಪರ್ಧಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ. ಪ್ರಸ್ತುತ ಕಾರ್ಯಕ್ರಮಕ್ಕೆ ಸಂಘಟನಾ ನಾಯಕರು, ಉಲಮಾ ಉಮರಾ ನೇತಾರರು, ಸಾಮಾಜಿಕ – ರಾಜಕೀಯ ನಾಯಕರು ಭಾಗವಹಿಸಲಿದ್ದಾರೆ ಎಂದು ಸೆಕ್ಟರ್ ಪ್ರ.ಕಾರ್ಯದರ್ಶಿ ನೌಫಾನ್ ಹಿಮಮಿ ಕಾವು ಪ್ರಕಟನೆಯಲ್ಲಿ ತಿಳಿಸಿದ್ದಾರೆ.