ಕಡಬ: ಸರಸ್ವತೀ ವಿದ್ಯಾಲಯ ಪ್ರೌಢಶಾಲೆ ಕಡಬ ಇಲ್ಲಿ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ (ರಿ.) ಪುತ್ತೂರು ಇವರ ವತಿಯಿಂದ ಕೋಡ್ ಕ್ರಾಫ್ಟ್ ವಿಜ್ಞಾನ ಮೇಳದಲ್ಲಿ ಉತ್ತಮ ಬದುಕಿಗೆ ವಿಜ್ಞಾನ ವಿಷಯದಲ್ಲಿ ವಿಜ್ಞಾನ ಕಾರ್ಯರೂಪ ಮಾದರಿ ಪ್ರದರ್ಶನ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ ಆ.6ರಂದು ಸಂಸ್ಥೆಯ ಯಾದವಶ್ರೀ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರಸ್ವತೀ ವಿದ್ಯಾಲಯದ ಕೋಶಾಧಿಕಾರಿ ಲಿಂಗಪ್ಪ.ಜೆ ವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಪ್ರಾಜೆಕ್ಟ್ ಮ್ಯಾನೇಜರ್ ಹೇಮಂತ್ ಇವರು ಕೋಡ್ ಕ್ರಾಫ್ಟ್ ವಿಜ್ಞಾನ ಮೇಳದ ಉದ್ದೇಶವನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಹಲವು ಮಾದರಿಗಳು ಪ್ರದರ್ಶನಗೊಂಡವು. ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಕೃಷ್ಣಪ್ರಸಾದ್, ಕು. ಅನನ್ಯ, ಕು.ಅನುಶ್ರೀ ಮಯ್ಯ ತೀರ್ಪುಗಾರರಾಗಿ ಸಹಕರಿಸಿದರು.
ವೇದಿಕೆಯಲ್ಲಿ ಸರಸ್ವತೀ ವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರಾದ ಸೀತಾರಾಮ ಗೌಡ, ಆಂಗ್ಲ ಮಾಧ್ಯಮದ ಮುಖ್ಯ ಶಿಕ್ಷಕ ವಸಂತ. ಕೆ, ಉಪಸ್ಥಿತರಿದ್ದರು. ವೇದಿಕೆಯಲ್ಲಿದ್ದ ದೈಹಿಕ ಶಿಕ್ಷಣ ಶಿಕ್ಷಕರಾದ ಲಕ್ಷ್ಮೀಶ ಗೌಡ ಆರಿಗ ಸ್ವಾಗತಿಸಿ, ವಿದ್ಯಾರ್ಥಿ ಕುಮಾರಿ ಹರಿಪ್ರಿಯ ಹರಿದಾಸ್ ಪ್ರಾರ್ಥಿಸಿದರು. ವಿಜೇತರ ಪಟ್ಟಿಯನ್ನು ಕೃಷ್ಣಪ್ರಸಾದ್ ವಾಚಿಸಿದರು. ಪ್ರಥಮ ಸ್ಥಾನ ಪೂರ್ವಿತ್ ಎನ್. ಪಿ ಮತ್ತು ರೋಶನ್ಕುಮಾರ್ ಡಿ ಪಿ 10ನೇ, ದ್ವಿತೀಯ ಎನ್ ಕೆ ಯಶ್ವಿತ್ ಮತ್ತು ಮೋಹಿತ್ ಬಿ ಕೆ 8ನೇ, ಕೀರ್ತನ್ ಕೆ ಹಾಗೂ ಯಕ್ಷಿತ್ 9ನೇ, ತೃತೀಯ ಸ್ಥಾನವನ್ನು ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಸಮಾಧಾನಕರ ಬಹುಮಾನವನ್ನು ಪೂಜನ್ ಡಿ ಆರ್ ಮತ್ತು ಲಿಶಿತ್ ಕುಮಾರ್ ಸಿ 8ನೇ ಹಾಗೂ ರಕ್ಷಾ ಎಂ ಜೆ ಮತ್ತು ಇಂಚರ ಜಿ 10ನೇ ತರಗತಿ ಪಡೆದುಕೊಂಡಿದ್ದಾರೆ. ಆಂಗ್ಲವಿಭಾಗದ ಶಿಕ್ಷಕಿ ಶ್ವೇತಾ.ಪಿ.ಕೆ. ವಂದಿಸಿ, ಶಿಕ್ಷಕಿ ಕಾವ್ಯಶ್ರೀ ಹರಿಕೃಷ್ಣ ನಿರೂಪಿಸಿದರು.