ಪ್ಲಾಟಿಂಗ್ ಆಗದೇ ಇರುವ ಜಮೀನುಗಳಿಗೆ ಮಧ್ಯಮಾವಧಿ, ದೀರ್ಘಾವಧಿ ಸಾಲ ನೀಡಲು ತೊಂದರೆ : ಹಸಿರು ಪಟ್ಟಿಯಲ್ಲಿ ಬಾಕಿ ಉಳಿದ ಸಾಲ ಮನ್ನಾದ ಮೊತ್ತವನ್ನು ಬಿಡುಗಡೆಗೊಳಿಸಿ-ಎಂಎಲ್‌ಸಿ ಕಿಶೋರ್ ಕುಮಾರ್‌ಗೆ ಕುಂಬ್ರ ಪ್ರಾ. ಕೃ. ಸ. ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ಮನವಿ

0

ಪುತ್ತೂರು: ಅಕ್ರಮ ಸಕ್ರಮದಡಿ ಜಮೀನು ಮಂಜೂರಾಗಿದ್ದು ಪ್ಲಾಟಿಂಗ್ ಮಾಡಲು ಬಾಕಿ ಇದ್ದ ಜಮೀನುಗಳಿಗೆ ಮಧ್ಯಮಾವಧಿ ದೀರ್ಘಾವಧಿ ಕೃಷಿ ಸಾಲಗಳನ್ನು ಒದಗಿಸಲಾಗುತ್ತಿತ್ತು ಅಲ್ಲದೆ ಹಸಿರು ಪಟ್ಟಿಯಲ್ಲಿ ಬಾಕಿ ಉಳಿದ ಸಾಲ ಮನ್ನಾದ ಮೊತ್ತವನ್ನು ಶೀಘ್ರದಲ್ಲಿ ಬಿಡುಗಡೆಗೊಳಿಸಲು ಸರಕಾರಕ್ಕೆ ಶಿಫಾರಸ್ಸು ಮಾಡುವಂತೆ ಕೋರಿ ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರರವರು ವಿಧಾನ ಪರಿಷತ್ತು ಸದಸ್ಯ ಕಿಶೋರ್ ಕುಮಾರ್ ಪುತ್ತೂರುರವರಿಗೆ ಮನವಿ ಸಲ್ಲಿಸಿದ್ದಾರೆ.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 2016 ಅವಧಿಯಲ್ಲಿ ಘೋಷಣೆ ಮಾಡಲಾದ ಸಾಲ ಮನ್ನಾ ಯೋಜನೆಯಿಂದ ರೈತರಿಗೆ ಆರ್ಥಿಕ ಅನುಕೂಲವಾಗಿತ್ತು,ಆದರೆ ತಾಂತ್ರಿಕ ದೋಷದಿಂದ ಕೆಲವೊಂದು ರೈತರಿಗೆ ಸಾಲ ಮನ್ನಾ ಯೋಜನೆ ಲಭ್ಯವಾಗಿಲ್ಲ ಪ್ರಸ್ತುತ ಹಸಿರು ಪಟ್ಟಿಯಲ್ಲಿರುವ ಎಲ್ಲಾ ರೈತರ ಸಾಲ ಮನ್ನಾದ ಮೊತ್ತವನ್ನು ಬಿಡುಗಡೆ ಗೊಳಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಅವರು ಮನವಿಯಲ್ಲಿ ವಿನಂತಿಸಿಕೊಂಡಿದ್ದಾರೆ.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಇಲ್ಲಿಯವರೆಗೆ ಅಕ್ರಮ ಸಕ್ರಮದಡಿ ಜಮೀನು ಮಂಜೂರಾಗಿದ್ದು ಪ್ಲಾಟಿಂಗ್ ಮಾಡಲು ಬಾಕಿ ಇದ್ದ ಜಮೀನುಗಳಿಗೆ ಮದ್ಯಮಾವಧಿ ದೀರ್ಘಾವಧಿ ಕೃಷಿ ಸಾಲಗಳನ್ನು ಒದಗಿಸಲಾಗುತ್ತಿತ್ತು ಸರ್ಕಾರಿ ಆದೇಶಗಳ ಪ್ರಕಾರ ಪ್ರಸ್ತುತ ಸಾಲಗಳನ್ನು ವಿತರಣೆ ಮಾಡಲಾಗುತ್ತಿಲ್ಲ ಇದರಿಂದ ತುಂಬಾ ರೈತ ಸದಸ್ಯರಿಗೆ ಅನಾನುಕೂಲವಾಗಿದ್ದು ತಮ್ಮ ಕುಟುಂಬ ನಿರ್ವಹಣೆ ಮಾಡುವಲ್ಲಿ ಕಷ್ಟ ಪಡುವಂತಾಗಿದ್ದು ಆದ್ದರಿಂದ ತಾವು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಹಿಂದಿನ ಹಾಗೆಯೇ ಸಾಲ ವಿತರಣೆ ಮಾಡಲು ವ್ಯವಸ್ಥೆ ಕಲ್ಪಿಸಬೇಕೆಂದು ಪ್ರಕಾಶ್ಚಂದ್ರ ರೈ ಕೈಕಾರರವರು ಮನವಿಯಲ್ಲಿ ವಿನಂತಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here